ಬೆಂಗಳೂರು: ಆಧಾರ್ ವಿರುದ್ಧ ವ್ಯವಸ್ಥಿತವಾಗಿ ಕಪ್ಪು ಮಸಿ ಬಳಿಯುವ ಬಗ್ಗೆ ಷಡ್ಯಂತ್ರವೊಂದು ಶುರುವಾಗಿದೆ ಎಂದು
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಾಜಿ ಅಧ್ಯಕ್ಷ ನಂದನ್ ನೀಲೇಕಣಿ ಹೇಳಿದ್ದಾರೆ.
ಆಧಾರ್ ಕಾರ್ಡ್‌ಗಳ ಮಾಹಿತಿ ಸೋರಿಕೆ ಕುರಿತಂತೆ ವರದಿ ಮಾಡಿದ ಪತ್ರಿಕೆ ವರದಿಗಾರ್ತಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದರ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಆಧಾರ್ ಕುರಿತಾಗಿ ಹರಡುತ್ತಿರುವ ಅಪಪ್ರಚಾರಗಳನ್ನು ನೋಡಿದರೆ ಇದು ಶೇ.100ರಷ್ಟು ವ್ಯವಸ್ಥಿತ ಪಿತೂರಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ. ಮಾಹಿತಿ ಸೋರಿಕೆ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆಧಾರ್ ಈಗ ಜಾರಿ ಯಲ್ಲಿದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ ಎಂದು ಹೇಳಿದ್ದಾರೆ. ಶೀಘ್ರ ದಲ್ಲಿಯೇ ಆಧಾರ್ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಸೂಕ್ತವಾದ ತೀರ್ಪು ನೀಡಲಿದೆ ಎಂದಿದ್ದಾರೆ. ಪ್ರಾಧಿಕಾರ ಜಾರಿಗೊಳಿಸಿದ ವರ್ಚುವಲ್ ಐಡಿ ಸೂಕ್ತವಾದ ಕ್ರಮ ಎಂದು ಶ್ಲಾಘಿಸಿದ್ದಾರೆ.