Advertisement

ಜಿಎಸ್‌ಟಿ ಬಳಿಕ ಅರ್ಥ ವ್ಯವಸ್ಥೆ ಚೇತರಿಕೆ: ಮೂಡಿಸ್‌

07:30 AM Mar 01, 2018 | Team Udayavani |

ನವದೆಹಲಿ: ಭಾರತದ ಆರ್ಥಿಕತೆಯು ನೋಟು ಅಮಾನ್ಯ ಮತ್ತು ಜಿಎಸ್‌ಟಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿದೆ ಎಂದು ವಿಶ್ವದ ಪ್ರಮುಖ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಮೂಡಿಸ್‌ ಹೇಳಿದೆ.  ಆದರೆ, ಇದೇ ವೇಳೆ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ. 7.6ಕ್ಕೆ ನಿಗದಿಗೊಳಿಸಿದೆ. ಕಳೆದ ನವೆಂಬರ್‌ನಲ್ಲಿ ಮೂಡೀಸ್‌ ಭಾರತದ ರೇಟಿಂಗ್‌ಅನ್ನು 13 ವರ್ಷಗಳ ನಂತರ ಏರಿಕೆ ಮಾಡಿ, ಬಿಎಎ3 ಇಂದ ಬಿಎಎ2ಗೆ ಹೆಚ್ಚಿಸಿತ್ತು. ಅಲ್ಲದೆ ಮುನ್ನೋಟವನ್ನು ಧನಾತ್ಮಕ ಎಂಬುದರಿಂದ ಸ್ಥಿರ ಎಂಬುದಾಗಿ ದಾಖಲಿಸಿತ್ತು.

Advertisement

ಹಾಲಿ ವಿತ್ತ ವರ್ಷದಲ್ಲಿ ಜಿಡಿಪಿ ಶೇ. 7.6 ಮತ್ತು 2018-19ರಲ್ಲಿ ಜಿಡಿಪಿ ಶೇ.7.5ರಷ್ಟಾಗಿರಲಿದೆ ಎಂದು ಮೂಡೀಸ್‌ ಅಂದಾಜಿಸಿದೆ. ಬಜೆಟ್‌ನಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಸುಸ್ಥಿರಗೊಳಿಸುವ ಕ್ರಮಗಳಿವೆ. ಈ ಭಾಗದ ಆರ್ಥಿಕತೆಯು ನೋಟು ಅಮಾನ್ಯ ನಿರ್ಧಾರದಿಂದ ಆಘಾತಕ್ಕೀಡಾಗಿತ್ತು. ಅಲ್ಲದೆ ಬ್ಯಾಂಕ್‌ ಮರುಬಂಡವಾಳ ಯೋಜನೆ ಕಾಲ ಕಳೆದಂತೆ ಅಭಿವೃದ್ಧಿ ದರ ಹೆಚ್ಚಲು ಕಾರಣವಾಗಬಲ್ಲದು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next