Advertisement

ಮಕ್ಕಳ ಸಾವು; ಕಫ‌ದ ಸಿರಪ್‌ ಕುರಿತು ತನಿಖೆ ಆರಂಭ

02:24 AM Oct 07, 2022 | Team Udayavani |

ಹೊಸದಿಲ್ಲಿ: ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಭಾರತದ ಕಂಪೆನಿ ತಯಾರಿಸಿದ ಕಫ‌ದ ಸಿರಪ್‌ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದ ಬೆನ್ನಲ್ಲೇ ಭಾರತದ ಔಷಧ ನಿರ್ದೇಶನಾ­ಲಯವು ಈ ಕುರಿತು ತನಿಖೆ ಆರಂಭಿಸಿದೆ.

Advertisement

ಹರಿಯಾಣದ ಸೋನೆಪತ್‌ ಮೂಲದ ಮೈಡೆನ್‌ ಫಾರ್ಮಾಸುಟಿಕಲ್ಸ್‌ ಲಿ.ನಲ್ಲಿ ತಯಾರಿಸಲಾದ ವಿಷಪೂರಿತ, ಕಳಪೆ ಗುಣಮಟ್ಟದ 4 ಬಗೆಯ ಕೆಮ್ಮು ನಿವಾರಕ ಸಿರಪ್‌ನಿಂದಾಗಿಯೇ ಪಶ್ಚಿಮ ಆಫ್ರಿಕಾದ ದೇಶದಲ್ಲಿ ಮೂತ್ರಕೋಶ ಸಮಸ್ಯೆ ಉಂಟಾಗಿ 66 ಮಕ್ಕಳು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಬುಧವಾರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿತ್ತು.

ಪ್ರೋಮೆಥಝೈನ್‌ ಓರಲ್‌ ಸೊಲ್ಯೂಷನ್‌, ಕಾಫೆಕ್ಸ್‌ಮೆಲಿನ್‌ ಬೇಬಿ ಕಾಫ್ ಸಿರಪ್‌, ಮೇಕಾಫ್ ಬೇಬಿ ಕಾಫ್ ಸಿರಪ್‌ ಮತ್ತು ಮ್ಯಾಗ್ರಿಪ್‌ ಎನ್‌ ಕೋಲ್ಡ್‌ ಸಿರಪ್‌ ಎಂಬ ನಾಲ್ಕು ಸಿರಪ್‌ಗ್ಳಲ್ಲಿ ಸ್ವೀಕಾರಾರ್ಹವಲ್ಲದಷ್ಟು ಪ್ರಮಾಣದಲ್ಲಿ ಡೈಥಿಲೀನ್‌ ಗ್ಲೆ„ಕೋಲ್‌ ಮತ್ತು ಇಥೈಲೀನ್‌ ಗ್ಲೆ„ಕೋಲ್‌ ಇರುವುದು ಕಂಡು­ಬಂದಿತ್ತು. ಈ ಅಂಶಗಳು ಮಾರಣಾಂತಿಕವಾಗಿದ್ದು, ಇದನ್ನು ಸೇವಿಸಿದರೆ ಕಿಡ್ನಿ ಹಾಗೂ ನರಸಂಬಂಧಿ ಸಮಸ್ಯೆ ಉಂಟಾಗುತ್ತದೆ. ಡಬ್ಲ್ಯುಎಚ್‌ಒ ಸೂಚನೆ ಬೆನ್ನಲ್ಲೇ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಪ್ರಕರಣದ ಬಗ್ಗೆ ತುರ್ತು ತನಿಖೆ ಆರಂಭಿಸಿದೆ. ಇದೇ ವೇಳೆ, ಸ್ಯಾಂಪಲ್‌ಗ‌ಳನ್ನು ಕೋಲ್ಕತಾಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, 2 ದಿನಗಳಲ್ಲಿ ವರದಿ ಬರುವ ಸಾಧ್ಯತೆಯಿದೆ ಎಂದಿದೆ ಕಂಪೆನಿ.

Advertisement

Udayavani is now on Telegram. Click here to join our channel and stay updated with the latest news.

Next