Advertisement

ಮುಂದಿನ ವರ್ಷ ಸಿರಿಂಜ್‌ ಕೊರತೆ?

12:56 AM Nov 12, 2021 | Team Udayavani |

ಜಿನೇವಾ: ಮುಂದಿನ ವರ್ಷದ ವೇಳೆಗೆ ಜಾಗತಿಕವಾಗಿ 200 ಕೋಟಿಗಳಷ್ಟು ಇಂಜೆಕ್ಷನ್‌ ಸಿರಿಂಜ್‌ಗಳ ಕೊರತೆ ತಲೆದೋರುವ ಸಾಧ್ಯತೆಯಿದ್ದು, ವಿವಿಧ ಲಸಿಕೆಗಳನ್ನು ನೀಡುವ ಪ್ರಕ್ರಿಯೆಗೆ ತಡೆಯಾಗುವ ಗಂಭೀರ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

Advertisement

ಕೋವಿಡ್‌ -19 ಲಸಿಕೆ ಅಭಿಯಾನಕ್ಕಾಗಿ ವಾಡಿಕೆಗಿಂತ ಹಲವು ಪಟ್ಟು ಹೆಚ್ಚು ಸಿರಿಂಜ್‌ ಬಳಕೆಯಾಗಿರುವುದೇ ಇದಕ್ಕೆ ಕಾರಣ. ಸಿರಿಂಜ್‌ ಉತ್ಪಾದನೆ ಹೆಚ್ಚದಿದ್ದರೆ ಕೊರತೆ ಉಂಟಾಗುವುದು ಖಚಿತ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೋವಿಡ್‌-19 ಲಸಿಕೆ ಡೋಸ್‌ಗಳು ಹೆಚ್ಚುತ್ತಿರುವ ಪ್ರಮಾಣಕ್ಕೆ ಸರಿಯಾಗಿ ಸಿರಿಂಜ್‌ ಉತ್ಪಾದನೆ ಕೂಡ ಹೆಚ್ಚಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಸಲಹೆಗಾರ್ತಿ ಲಿಸಾ ಹೆಡ್‌ಮನ್‌ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ನ.18ರಂದು ಈ ಶತಮಾನದ ಅತಿದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ

ಸಿರಿಂಜ್‌ ಕೊರತೆಯಿಂದಾಗಿ ಅವುಗಳ ಮರುಬಳಕೆಯಂಥ ಅಪಾಯಕಾರಿ ಪ್ರಯೋಗವೂ ನಡೆಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next