Advertisement
ಇದು ಸಿರಿಯಾ ನಿರಾಶ್ರಿತ ಬಾಲಕಿಯ ಕರುಣಾಜನಕ ಸ್ಥಿತಿ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 8 ವರ್ಷದ ಮಾಯಾ ಮೆರ್ರಿಗೆ ಈಗ ಟರ್ಕಿಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇನ್ನು 3 ತಿಂಗಳಲ್ಲಿ ಕೃತಕ ಕಾಲುಗಳ ನೆರವಿನೊಂದಿಗೆ ಈಕೆ ಎಲ್ಲರಂತೆ ನಡೆಯುತ್ತಾಳೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಈ ರೀತಿ ಡಬ್ಬಗಳನ್ನು ಕೃತಕ ಕಾಲುಗಳನ್ನಾಗಿ ಮಾಡಿಕೊಂಡು ನಡೆಯುವುದು ಸಾಧ್ಯವಿಲ್ಲ ಎಂದು ಈಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕಿ ತಂದೆ ಮೊಹಮ್ಮದ್ ಮೆರ್ರಿ ಕೂಡ ಇದೇ ಸಮಸ್ಯೆಯಿಂದ ಬಳಲು ತ್ತಿದ್ದು, ಇವರು ಕೂಡ ಗುಣಮುಖರಾಗಿ ಎಲ್ಲ ರಂತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಿರಿಯಾದಲ್ಲಿ ಘರ್ಷನೆ ನಡೆಯುತ್ತಿದ್ದಾಗ ಇವರು ಪತ್ನಿ ಹಾಗೂ ತನ್ನ 6 ಮಕ್ಕಳೊಂದಿಗೆ ಟರ್ಕಿಗೆ ಬಂದು ಆಶ್ರಯ ಪಡೆದಿದ್ದರು.
ಖಾಲಿ ಡಬ್ಬ ಕಟ್ಟಿಕೊಂಡು ನಡೆಯುವ ಬಾಲಕಿ
ಈಕೆಯ ಸಾಹಸಕ್ಕೆ ವೈದ್ಯರ ಅಚ್ಚರಿ
ಶೀಘ್ರ ಕೃತಕ ಕಾಲು ಅಳವಡಿಕೆ