Advertisement
ಒಂದು ತಿಂಗಳ ಹಿಂದೆಯೇ ಹಳೆಯ ರಸ್ತೆ ಮತ್ತು ವೃತ್ತದ ಭಾಗ ತೆರವು ಮಾಡಲಾಗಿತ್ತು. ಇದೇ ಸಂದರ್ಭ ಸಿಸಿ ಟಿವಿ ಟವರ್‌ನ ಬುಡದ ಸುತ್ತಲಿನ ಮಣ್ಣು ಕೂಡ ತೆಗೆಯಲಾಗಿದೆ. ಟವರನ್ನು ತೆರವುಗೊಳಿಸಿಲ್ಲ. ಇದುವರೆಗೆ ರಸ್ತೆಯ ಕಾಮಗಾರಿಯನ್ನೂ ನಡೆಸಿಲ್ಲ. ಇದೀಗ ಮಳೆಗಾಲ ಸಮೀಪಿಸುತ್ತಿರುವುದರಿಂದ ಟವರ್‌ನ ಬುಡದ ಮಣ್ಣು ಕೊಚ್ಚಿ ಹೋಗಿ ಟವರ್ ಬೀಳುವ ಅಪಾಯವಿದೆ. ಪಕ್ಕದಲ್ಲೇ ಸೂಪರ್ ಮಾರ್ಕೆಟ್, ಇತರ ಅಂಗಡಿ, ಕಚೇರಿಗಳು ಇವೆ. ಜನನಿಬಿಡ ಸ್ಥಳದಲ್ಲಿ ಅಪಾಯಕಾರಿಯಾಗಿರುವ ಈ ಟವರ್‌ನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದೇ ಜಾಗದಲ್ಲಿ ರಸ್ತೆ ಮೇಲ್ಭಾಗದಿಂದ ಹಾದು ಹೋಗಿದ್ದು ತಳಭಾಗದಲ್ಲಿರುವ ಅಂಗಡಿ, ಕಚೇರಿಗಳಿಗೆ ಮಳೆ ನೀರು ನುಗ್ಗುವ ಆತಂಕ ಎದುರಾಗಿದೆ. ಮಣ್ಣು ಹಾಕಿ ಬಿಟ್ಟು ಹೋದವರು ಮತ್ತೆ ಕಾಮಗಾರಿ ನಡೆಸಿಲ್ಲ. ಒಂದು ಮಳೆ ಬಂದರೂ ಮಣ್ಣು ಅಂಗಡಿ ಸೇರಲಿದೆ. ಇಲ್ಲಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಈಗಾಗಲೇ ಶಾಸಕರಿಗೂ ಮನವಿ ಮಾಡಿದ್ದೇವೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.