ಬೆಂಗಳೂರು: ಕಳೆದ ನಾಲ್ಕು ತ್ತೈಮಾಸಿಕಗಳಿಂದ ನಷ್ಟದಲ್ಲಿ ಹಾದಿಯಲ್ಲಿದ್ದ ಸಾಗುತ್ತಿದ್ದ ಸಿಂಡಿಕೇಟ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ 3ನೇ ತ್ತೈಮಾಸಿಕದ ಹಣಕಾಸು ವರದಿಯಲ್ಲಿ 108 ಕೋಟಿ ರೂ. ನಿವ್ವಳ ಲಾಭ ಗಳಿಸಿ ಅದ್ಭುತ ಸಾಧನೆ ಮಾಡಿದೆ.
ನಗರದ ಕೇಂದ್ರ ಕಚೇರಿಯಲ್ಲಿ ಇತೀ¤ಚೆಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ-ಸಿಇಒ ಮೃತ್ಯುಂಜಯ ಮಹಾಪಾತ್ರ ಮಾತನಾಡಿ, ಸಿಂಡಿಕೇಟ್ ಬ್ಯಾಂಕ್ 2018ರ ಡಿಸೆಂಬರ್ ಅಂತ್ಯದ ಮೂರನೇ ತ್ತೈಮಾಸಿಕದಲ್ಲಿ 108 ಕೋಟಿ ಲಾಭ ಗಳಿಸಿರುವುದು ಮಾತ್ರವಲ್ಲದೆ ಬಹಳಷ್ಟು ವಿಷಯಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಮಾರುಕಟ್ಟೆ, ಗ್ರಾಹಕರು ಮತ್ತು ಹೂಡಿಕೆದಾರರಿಗೆ ಅನುಕೂಲವಾಗುವಂತೆ ವರ್ತಿಸಿದೆ.
ಕಳೆದ ಮೂರು ತಿಂಗಳಲ್ಲಿ ನಮ್ಮ ದೇಶೀಯ ಠೇವಣಿ ಶೇಕಡವಾರು ಕಾಸಾ 33.49 ರಿಂದ ಶೇ.34.96 ತಲುಪಿ, ಶೇ.1.50 ರಷ್ಟು ಏರಿಕೆಯಾಗಿದೆ. ರಿಟೈಲ್ ಅವಧಿ ಠೇವಣಿಗಳು ಶೇ.56.41 ರಿಂದ ಶೇ.60.58 ರಷ್ಟು ಹೆಚ್ಚಳವಾಗುವ ಮೂಲಕ ನಿವ್ವಳ ಬಡ್ಡಿ ಆದಾಯ (ಎನ್‌ಐಐ)ದಲ್ಲಿ ಶೇ.3 ರಷ್ಟು ಸುಧಾರಣೆ ಕಂಡುಬಂದಿದೆ.
ಸೆಪ್ಟೆಂಬರ್‌ನಲ್ಲಿ 1572 ಕೋಟಿಗಳಿದ್ದ ಎನ್‌ಐಐ ಡಿಸೆಂಬರ್ ಅಂತ್ಯದಲ್ಲಿ 1619 ಕೋಟಿ ರೂ.ಗಳಿಗೆ ಏರಿಕೆಯಾಗಿ ಬ್ಯಾಂಕು ಸುಸ್ಥಿತಿಗೆ ತಲುಪಿದೆ. ಆದರೆ, ಒಂಬತ್ತು ತಿಂಗಳ ಎನ್‌ಐಐ 16,115 ಕೋಟಿ ರೂ.ಗಳಿದ್ದರೂ ಕಳೆದ ಬಾರಿಯ ಈ ಅವಧಿಗೆ ಹೋಲಿಸಿದರೆ 3030 ಕೋಟಿ ಇಳಿಕೆಯಾಗಿದೆ. 4,67,911 ಕೋಟಿ ರೂ.ಗಳ ಜಾಗತಿಕ ವಹಿವಾಟು ಕಳೆದ ತ್ತೈಮಾಸಿಕಕ್ಕಿಂತ ಕೊಂಚೆ ಕಡಿಮೆ ಎನಿಸಿದೆ.
ಬ್ಯಾಂಕಿನ ನಿವ್ವಳ ಎನ್‌ಪಿಎ (ಅನುತ್ಪಾದಕ ಆಸ್ತಿ) ಪ್ರಮಾಣ ಸೆಪ್ಟೆಂಬರ್ 2018ರಲ್ಲಿನ 12.98%ಗೆ ಹೋಲಿಸಿದಾಗ ಈ ಅವಧಿಗೆ ಶೇ.12.54 ಇಳಿಕೆಯಾಗಿದೆ. ಸ್ಥಳೀಯ ನಿಮ್ (ಎನ್‌ಐಎಂ) ಸೆಪ್ಟೆಂಬರ್ 2018ರಲ್ಲಿ ಶೇ.2.68 ರಷ್ಟಿದ್ದದ್ದು, ಡಿಸೆಂಬರ್ ಮಾಸಾಂತ್ಯದಲ್ಲಿ ಶೇ.2.80 (12ಬಿಪಿಎಸ್)ಕ್ಕೇರಿರುವುದು ಉತ್ತಮ ಬೆಳವಣಿಗೆ.
ಡಿ.31ಕ್ಕೆ ಬ್ಯಾಂಕಿನ ಒಟ್ಟು ಠೇವಣಿ 2,59,064 ಕೋಟಿ ರೂ.ಗಳಾಗಿದ್ದರೆ, ಮುಂಗಡ 2,08,847 ಕೋಟಿ ರೂ.ಗಳಾಗಿದೆ. ಬ್ಯಾಂಕು ಆದ್ಯತಾ ವಲಯ ಶೇ.40.25 ರಷ್ಟು, ಕೃಷಿ ಸಾಲ ಶೇ.18.69 ಹಾಗೂ ಇತರೆ ಆದ್ಯತಾ ಕ್ಷೇತ್ರದಲ್ಲಿ ಶೇ.21.55 ರಷ್ಟು ಹೆಚ್ಚಿನ ಸಾಲ ವಿತರಣೆ ಮಾಡಿ ಪ್ರಗತಿ ಕಂಡಿದೆ ಎಂದರು. ಕಾರ್ಯನಿರ್ವಾಹಕ ನಿರ್ದೇಶಕ ಎಸ್. ಕೃಷ್ಣನ್, ಅಜಯ್ ಖುರಾನ ಹಾಗೂ ಸಿಎಫ್‌ಒ ಉದಯ್ ಶಂಕರ್ ಮಜುಂದಾರ್ ಉಪಸ್ಥಿತರಿದ್ದರು.