Advertisement

“ಪ್ರಧಾನ ಕಚೇರಿ ಮಣಿಪಾಲದಲ್ಲೇ ಉಳಿಯಲಿ’

06:00 AM Nov 25, 2018 | Team Udayavani |

ಉಡುಪಿ: ಮಣಿಪಾಲದಲ್ಲಿ ಆರಂಭಗೊಂಡ ಸಿಂಡಿಕೇಟ್‌ ಬ್ಯಾಂಕ್‌ ಈ ಭಾಗದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಹಾಗಾಗಿ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಸ್ಥಳಾಂತರಿಸುವ ನಿರ್ಧಾರವಾಗಿದ್ದರೆ ಅದನ್ನು ಕೈಬಿಡಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ಮನವಿ ಮಾಡಿದ್ದಾರೆ. ಶನಿವಾರ ಉಡುಪಿ ದುರ್ಗಾ ಇಂಟರ್‌ನ್ಯಾಶನಲ್‌ ಹೊಟೇಲ್‌ ಸಭಾಂಗಣದಲ್ಲಿ ಎರಡು ದಿನಗಳ ಸಿಂಡಿಕೇಟ್‌ ಬ್ಯಾಂಕ್‌ ಅಧಿಕಾರಿಗಳ ಸಂಘಟನೆಯ 15ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪ್ರಧಾನ ಕಚೇರಿ ಸ್ಥಳಾಂತರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಆದಾಗ್ಯೂಈ ಬಗ್ಗೆ ಬ್ಯಾಂಕ್‌ನ ಚೇರ್‌ಮನ್‌ಗೆ ಪತ್ರ ಬರೆದು ಅಂತಹ ನಿರ್ಧಾರಗಳಾಗಿದ್ದರೆ ಕೈಬಿಡುವಂತೆ ಮನವಿ ಮಾಡುತ್ತೇನೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಸಂಘಟಿಸುವುದು ಅವಶ್ಯವಾಗುತ್ತದೆ. ನಾನು ಕೂಡ ಸಿಂಡಿಕೇಟ್‌ ಬ್ಯಾಂಕ್‌ನ ಗ್ರಾಹಕನಾಗಿದ್ದು ಉಳಿದೆಲ್ಲ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಸಂಪರ್ಕ ಸಿಂಡಿಕೇಟ್‌ ಬ್ಯಾಂಕ್‌ ಜತೆಗಿದೆ. ಸಿಂಡಿಕೇಟ್‌ ಬ್ಯಾಂಕ್‌ ಹಲವಾರು ಸಮಾಜಮುಖೀ ಚಟುವಟಿಕೆಗಳ ಜತೆಗೆ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡುತ್ತಾ ಬರುತ್ತಿದೆ ಎಂದು ಭಟ್‌ ಹೇಳಿದರು.

ಸಂಘಟನೆಯ ಮಾಜಿ ಅಧ್ಯಕ್ಷ ಎಂ.ಎಸ್‌. ಭಾಗವತ್‌ ಮಾತನಾಡಿ, ಈ ಸಂಘಟನೆ 1977ರಲ್ಲಿ ಆರಂಭವಾಗಿದ್ದು ಸದಸ್ಯರಲ್ಲದವರಿಗೆ ಕೂಡ ಸಹಾಯ ಮಾಡುತ್ತಿದೆ ಎಂದರು. ಸಂಘಟನೆಯ ಅಧ್ಯಕ್ಷ ವಿಶ್ವನಾಥನ್‌ ಕೆ.ಪಿ., ಪ್ರಧಾನ ಕಾರ್ಯದರ್ಶಿ ಅರುಣ್‌ ಎಂ.ಐ., ಸ್ವಾಗತ ಸಮಿತಿಯ ಚೇರ್‌ಮನ್‌ ಪ್ರಭಾಕರ ಭಟ್‌, ಪುರಸಭೆ ಮಾಜಿ ಅಧ್ಯಕ್ಷ ಸೋಮಶೇಖರ ಭಟ್‌ ಉಪಸ್ಥಿತರಿದ್ದರು. ಸಂಘಟನ ಕಾರ್ಯದರ್ಶಿ ಆದರ್ಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next