Advertisement

ಸಿಂಡಿಕೇಟ್‌ ಬ್ಯಾಂಕ್‌ಗೆ 6552ಕೋಟಿ ನಿವ್ವಳ ಬಡ್ಡಿ ಆದಾಯ

11:28 AM May 17, 2018 | |

ಬೆಂಗಳೂರು: ಸಾರ್ವಜನಿಕ ವಲಯದ ಸಿಂಡಿಕೇಟ್‌ ಬ್ಯಾಂಕ್‌ 2017-18ನೇ ಸಾಲಿನ ವಿತ್ತ ವರ್ಷದಲ್ಲಿ 6552 ಕೋಟಿ ರೂ. ನಿವ್ವಳ ಬಡ್ಡಿ ಆದಾಯ ಗಳಿಸಿದೆ. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೆಲ್ವಿನ್‌ ರೇಗೊ ಅವರು ಮಂಗಳವಾರ ಆರ್ಥಿಕ ವರ್ಷದ 4ನೇ ತ್ತೈಮಾಸಿಕದ ಹಣಕಾಸು ವರದಿಯಲ್ಲಿ ಈ ಅಂಶವನ್ನು ವಿವರಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 6276 ಕೋಟಿ ರೂ.ಗಳ ನಿವ್ವಳ ಬಡ್ಡಿ ಆದಾಯ ಗಳಿಸಿದ್ದು, ಈ ಸಾಲಿನ ಅಂತ್ಯದಲ್ಲಿ ಶೇ.4ರಷ್ಟು ಹೆಚ್ಚಳ ಕಂಡುಕೊಂಡಿದೆ. 4,96,112 ಲಕ್ಷ ಕೋಟಿ ರೂ.ಗಳ ಜಾಗತಿಕ ವಹಿವಾಟು ನಡೆಸಿರುವ ಬ್ಯಾಂಕ್‌, ಹೂಡಿಕೆ ಹಣದಲ್ಲಿ ಶೇ.5ರಷ್ಟು ಹೆಚ್ಚಳ ಮಾಡಿಕೊಂಡು, 2,72,776 ಲಕ್ಷ ಕೋಟಿಗೆ ತಲುಪಿದೆ. ಸಾಲ ಮುಂಗಡದಲ್ಲೂ ಶೇ.8ರಷ್ಟು ಏರಿಕೆಯಾಗಿ 2,23,346 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದರು.

Advertisement

ಆದ್ಯತಾ ವಲಯದ ಸಾಲದಲ್ಲಿ ಶೇ.7.15ರಷ್ಟು, ಕೃಷಿ ಸಾಲ ಶೇ.4.88ರಷ್ಟು ಹಾಗೂ ರಿಟೈಲ್‌ ಸಾಲಗಳಲ್ಲಿ
ಶೇ.7ರಷ್ಟು ಹೆಚ್ಚಳ ಮಾಡಿರುವ ಬ್ಯಾಂಕ್‌, 2018ರ ಆರ್ಥಿಕ ವರ್ಷದ ವೇಳೆಗೆ 3223 ಕೋಟಿ ರೂ.
ಗಳಷ್ಟು ನಿವ್ವಳ ನಷ್ಟ ಅನುಭವಿಸಿದೆ. ಸಾಲದ ರೂಪದಲ್ಲಿ ಹೆಚ್ಚಿನ ಹಣ ಪೂರೈಕೆಯಾಗಿರುವುದರಿಂದ ಖಜಾನೆ
ಆದಾಯ ಹಾಗೂ ಎಂಟಿಎಂ ಸವಕಳಿ ಕಡಿಮೆಯಾಗಿದೆ. ಆದರೂ ನಗದು ವಸೂಲಾತಿಯಲ್ಲಿ ಪ್ರಗತಿ ಸಾಧಿಸಲಾಗಿದೆ.
 
ಕಳೆದ ವರ್ಷದ 2,709 ಕೋಟಿ ರೂ. ವಸೂಲಾತಿಯಿಂದ ಈ ವರ್ಷಾಂತ್ಯಕ್ಕೆ 3,331 ಕೋಟಿ ರೂ.ಗೆ ಹೆಚ್ಚಳವಾಗಿದೆ. 2018ರ ಮಾರ್ಚ್‌ ಅಂತ್ಯದಲ್ಲಿ ಅನುತ್ಪಾದಕ ಆಸ್ತಿ (ಎನ್‌ಪಿಎ) ಅನುಪಾತ 11.53%ರಲ್ಲಿದ್ದು, ನಿವ್ವಳ ಎನ್‌ಪಿಎ ಅನುಪಾತ 6.28% ರಲ್ಲಿದೆ. ಸಿಂಡಿಕೇಟ್‌ ಬ್ಯಾಂಕ್‌ ಶಾಖೆಗಳ ಸಂಖ್ಯೆ 4013 ತಲುಪಿದ್ದು, ಎಟಿಎಂ ಸಂಖ್ಯೆ 4248 ತಲುಪಿದೆ ಎಂದು ಅವರು ವಿವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next