Advertisement

ಮೂರು ಕಂಪನಿಗಳೊಡನೆ ಸಿಂಡ್‌ ಬ್ಯಾಂಕ್‌ ಒಪ್ಪಂದ

12:30 AM Jan 03, 2019 | Team Udayavani |

ಬೆಂಗಳೂರು: ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳನ್ನು ಆರಂಭಿಸಲು ಇಚ್ಛಿಸುವ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಸಿಂಡಿಕೇಟ್‌
ಬ್ಯಾಂಕ್‌ ಮೂರು ಕಂಪನಿಗಳೊಡನೆ ಒಪ್ಪಂದ ಮಾಡಿಕೊಂಡಿದೆ.

Advertisement

ಬ್ಯಾಂಕಿಂಗ್‌ ಕ್ಷೇತ್ರದ ವ್ಯಾಪಕ ಅನುಭವವನ್ನು ಮೆ. ಆತ್ಯಾತಿ ಟೆಕ್ನಾಲಜೀಸ್‌, ಮೆ.ಎಸ್‌ಆರ್‌ಇಐ ಎಕ್ವಿಪೆ¾ಂಟ್‌ ಫೈನಾನ್ಸ್‌ ಹಾಗೂ ಎಸ್‌ಬಿಐ ಲೈಫ್‌ನೊಂದಿಗೆ ಹಂಚಿಕೊಳ್ಳಲಿದೆ. ಸೋಮವಾರ ನಗರದ ಹೋಟೆಲಿನಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೃತ್ಯುಂಜಯ ಮಹಾಪಾತ್ರ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಮಾತನಾಡಿದರು. ಸಿಂಡಿಕೇಟ್‌ ಬ್ಯಾಂಕ್‌ ಇತರ ಸಂಸ್ಥೆಗಳೊಡನೆ ಜತೆಗೂಡಿ ಕೆಲಸ ಮಾಡುವ ಹೊಸತನದ ಚಟುವಟಿಕೆಯತ್ತ ಹೆಜ್ಜೆ ಹಾಕಿದೆ. ಇದರಡಿ ಎಸ್‌ಎಂಇ ಹಾಗೂ ಆದ್ಯತಾ ವಲಯದಲ್ಲಿ ಹೊಸ ಉದ್ಯಮ ಆರಂಭಿಸಲು ಇಚ್ಛಿಸುವ ಮಹಿಳಾ ಫಲಾನುಭವಿಗಳಿಗೆ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಒದಗಿಸುವ ಕಾರ್ಯ ಇದಾಗಿದೆ ಎಂದರು.

ಆತ್ಯಾತಿ ಟೆಕ್ನಾಲಜೀಸ್‌ ಒಂದು ಫಿನ್‌ ಟೆಕ್‌ ಕಂಪನಿಯಾಗಿದ್ದು, ಮಹಿಳಾ ಫಲಾನುಭವಿಗಳನ್ನು ಗುರುತಿಸಿ “ಘನಸೇವ’ ಹೆಸರಿನಲ್ಲಿ ಬ್ಯಾಂಕ್‌ ಸಂಪರ್ಕಕ್ಕೆ ತರುವ ಕಾರ್ಯದಲ್ಲಿ ನೆರವಾಗಲಿದೆ. ಹಣಕಾಸು ಸೌಲಭ್ಯ ಒದಗಿಸಿದ ಬ್ಯಾಂಕಿನ ಸಾಲ ವಸೂಲಾತಿಯಲ್ಲಿ ಉಸ್ತುವಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಲಿದೆ.

ಭಾರತೀಯ ರಿಸರ್ವ್‌ ಬ್ಯಾಂಕಿನ ದೃಷ್ಟಿಯಲ್ಲಿ ಎಸ್‌ಆರ್‌ಇ ಎಕ್ವಿಪೆ¾ಂಟ್‌ ಲಿ., ಆದ್ಯತಾ ವಲಯದ ನಿರ್ಮಾಣ, ಗಣಿಗಾರಿಕೆ ಮತ್ತು ಅಲೈಡ್‌ ಉಪಕರಣಗಳ ಪ್ರಮುಖ ಬಂಡವಾಳಗಾರ ಸಂಸ್ಥೆಯಾಗಿದೆ.

ಆದ್ಯತಾ ವಲಯದಲ್ಲಿ ಹೆಚ್ಚಿನ ಸಾಲ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್‌ ಇವರೊಡನೆ ಒಪ್ಪಂದ ಮಾಡಿಕೊಂಡಿದೆ. ಸಾಮಾನ್ಯ ಸಾಲ ನೀತಿ ಹಾಗೂ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಕೋ-ಆರ್ಡಿನೇಷನ್‌ ಮಾಡೆಲ್‌ನಲ್ಲಿ ಅಳವಡಿಸಲಿದೆ.
ಅಂತಿಮವಾಗಿ ನಾವು ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ನಮ್ಮ ಗ್ರಾಹಕರನ್ನು ಎಸ್‌ಬಿಐ ಲೈಫ್‌ನೊಂದಿಗೆ ಜೋಡಿಸುವ ಕಾರ್ಯ ಇದರಿಂದಆಗಲಿದೆ. ಆ ಮೂಲಕ ನಮ್ಮ ಗ್ರಾಹಕರಿಗೆ ವಿಮಾಭದ್ರತೆ ಎಸ್‌ಬಿಐ ಲೈಫ್‌ ಒದಗಿಸಲಿದೆ.

Advertisement

ಸ್ಟೆಸ್‌ ಅಸೆಟ್ಸ್‌ ಮ್ಯಾನೇಜ್ಮೆಂಟ್ ವರ್ಟಿಕಲ್‌: ಎನ್‌ ಪಿಎ ವಸೂಲಾತಿ ಹೆಚ್ಚಿಸುವ ಸಲುವಾಗಿ ಸಾರ್ವಜನಿಕ ಬ್ಯಾಂಕುಗಳಲ್ಲಿ ಸ್ಟೆಸ್‌ ಅಸೆಟ್ಸ್‌ ಮ್ಯಾನೇಜ್ಮೆಂಟ್  ವರ್ಟಿಕಲ್‌ (ಎಸ್‌ಎಎಂವಿ) ಉಪಕ್ರಮವನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸಲು ಕೇಂದ್ರ ಹಣಕಾಸು ಸಚಿವಾಲಯ ಆದೇಶ ನೀಡಿದೆ. ಅದರ ಪ್ರಕಾರ ನಾವು ಬೆಂಗಳೂರಿನ ಕಾರ್ಪೋರೇಟ್‌ ಕಚೇರಿಯಲ್ಲಿ ಎಸ್‌ಎಎಂವಿ ವಿಂಗ್‌ ರಚಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಮಹಾಪಾತ್ರ ವಿವರಿಸಿದರು.

ಈ ಸಂದರ್ಭದಲ್ಲಿ ಆತ್ಯಾತಿ ಟೆಕ್ನಾಲಜೀಸ್‌ ರಾಮರಾಜು ಮತ್ತು ಎಸ್‌ಆರ್‌ಇಐ ಎಕ್ವಿಪೆ¾ಂಟ್‌ ಪೈನಾನ್ಸ್‌ ಪ್ರಕಾಶ್‌, ಎಸ್‌ಬಿಐ ಲೈಫ್‌ ಸಂಜೀವ್‌ ಮೋತಿವಾಲ್‌ ಮತ್ತು ದೇಬಶಿಶ್‌ ಚಟರ್ಜಿ, ಬ್ಯಾಂಕಿನ ಇಡಿಗಳಾದ ಅಜಯ್‌ ಖುರಾನ ಮತ್ತು ಕೃಷ್ಣ ಇತರರು ಉಪಸ್ಥಿತರಿದ್ದರು.

ಪೈಲೆಟ್‌ ಪ್ರೊಗ್ರಾಂ: ಎಂಎಸ್‌ಇ ಹಾಗೂ ಆದ್ಯತಾವಲಯದ ಸಾಲ ಸೌಲಭ್ಯದ ಘನಸೇವ ಕಾರ್ಯಕ್ರಮವನ್ನು ದೇಶಾದ್ಯಂತ ವಿಸ್ತರಿಸುವ ಮುನ್ನ ಆರಂಭಿಕದ ಪ್ರಯತ್ನವಾಗಿ ಬೆಂಗಳೂರು, ಮಧುರೈ ಹಾಗೂ ಕಣ್ಣೂರಿನಲ್ಲಿ ಚಾಲನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next