Advertisement
ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದರೂ ಹೋಂ ಐಸೋಲೇಷನ್‌ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸೋಂಕಿನ ಯಾವುದೇ ಗುಣಲಕ್ಷಣಗಳಿಲ್ಲದ ಸೋಂಕಿತ ಮನೆಯಲ್ಲಿ ಪ್ರತ್ಯೇಕವಾಗಿರಲು ಎಲ್ಲಾ ವ್ಯವಸ್ಥೆ ಇದ್ದರೆ ಮಾತ್ರ ಹೋಂ ಐಸೋಲೇಷನ್‌ಗೆ ಅವಕಾಶ ನೀಡಲಾಗುತ್ತದೆ.
Related Articles
Advertisement
ಪರೀಕ್ಷೆಗೆ ಮುಗಿ ಬೀಳುತ್ತಿರುವ ಯುವಕರು: ಮಂಡ್ಯ ನಗರ ಸೇರಿ ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಮಾದರಿ ಸಂಗ್ರಹ ಕೇಂದ್ರಗಳಲ್ಲಿಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಇದರಿಂದ ಪ್ರತಿದಿನ3 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ.
ವೇಗ ಪಡೆದುಕೊಂಡ ಸೋಂಕು: ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಕಳೆದ ಒಂದು ವಾರದಿಂದ ಎರಡಂಕಿ ದಾಟಿಸೋಂಕು ಪ್ರಕರಣ ದಾಖಲಾಗುತ್ತಿವೆ. ಡಿಸೆಂಬರ್‌ನಲ್ಲಿ ಒಂದಂಕಿ ಪ್ರಕರಣ ದಾಖಲಾಗುತ್ತಿದ್ದವು. ನಂತರ ಜನವರಿ 1ರಿಂದ ಕೊರೊನಾ ಸೋಂಕುವೇಗ ಪಡೆದು ಕೊಂಡಿದೆ. ಜ.5ರಂದು 36 ಪ್ರಕರಣ ದಾಖಲಾದರೆ, 6ರಂದು 66 ಪ್ರಕರಣ ದಾಖಲಾಗುವ ಮೂಲಕ ಅದರ ಸಂಖ್ಯೆದುಪ್ಪಟ್ಟಾಗಿತ್ತು. 7ರಂದು 129, 8 ರಂದು 183,9ರಂದು 261, 10ರಂದು 306, 11 ರಂದು 263, 12ರಂದು 319, 13ರಂದು 406, 14ರಂದು554, 15ರಂದು 718 ಪ್ರಕರಣ ದಾಖಲಾಗಿವೆ.
ಸೋಂಕು ಹೆಚ್ಚಲು ನಿರ್ಲಕ್ಷವೇ ಕಾರಣ :
ಕೆಲವು ಸೋಂಕಿತರು ಯಾವುದೇ ವ್ಯವಸ್ಥೆ ಇಲ್ಲದಿದ್ದರೂ ಹೋಂ ಐಸೋಲೇಷನ್‌ನಲ್ಲಿ ಉಳಿದಿದ್ದಾರೆ. ಅಲ್ಲದೆ, ಗುಣಲಕ್ಷಣ ಇಲ್ಲದಿರುವುದರಿಂದ ಪ್ರತ್ಯೇಕವಾಗಿರದೆ ನಿರ್ಲಕ್ಷ್ಯ ವಹಿಸಿ ಎಲ್ಲೆಂದರಲ್ಲಿ ಅಡ್ಡಾಡುತ್ತಿರುವುದರಿಂದ ಸೋಂಕು ಹೆಚ್ಚಾಗುತ್ತಿದೆ ಎಂಬ ಆತಂಕವೂ ಹೆಚ್ಚಾಗಿದೆ. ಆಯಾ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅಲ್ಲದೆ,ಸರ್ಕಾರದ ನಿರ್ದೇಶನದಂತೆ ಸೋಂಕಿನ ಲಕ್ಷಣಗಳಿಲ್ಲದವರಿಗೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡುವಂತೆ ಸೂಚಿಸಿದೆ. ಇದೇ ಈಗ ಸೋಂಕು ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಪ್ರತಿದಿನ ಸೋಂಕಿನ ಪ್ರಕರಣ ಏರಿಕೆಯಾಗುತ್ತಲೇ ಇದೆ. ಸೋಂಕಿನ ಲಕ್ಷಣ ಇಲ್ಲದವರಿಗೆ ಸರ್ಕಾರದ ನಿರ್ದೇಶನದಂತೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡಲಾಗುತ್ತಿದೆ. ಸೋಂಕಿತರು ನಿಯಮ ಉಲ್ಲಂಘಿಸಬಾರದು. ಅಲ್ಲದೇ, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಬೇಕು. – ಡಾ.ಟಿ.ಎನ್.ಧನಂಜಯ, ಡಿಎಚ್‌ಒ, ಮಂಡ್ಯ
-ಎಚ್.ಶಿವರಾಜು