Advertisement

ಪೇಯ್ಡ್ ನ್ಯೂಸ್‌ ವಿರುದ್ಧ ವಿಚಾರ ಸಂಕಿರಣ

10:40 AM Apr 04, 2019 | sudhir |

ಬದಿಯಡ್ಕ :ಪೇಯ್ಡ್ ನ್ಯೂಸ್‌ ವಿರುದ್ಧ ಜಾಗೃತಿ ವಿಚಾರ ಸಂಕಿರಣ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರಗಿತು. ಎಂ.ಸಿ.ಎಂ.ಸಿ. ಜಿಲ್ಲಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿ ಡಾ.ಡಿ. ಸಜಿತ್‌ ಬಾಬು ಉದ್ಘಾಟಿಸಿದರು. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ. ಅಬ್ದುಲ್‌ ರಹಮಾನ್‌ ಅಧ್ಯಕ್ಷತೆ ವಹಿಸಿದ್ದರು. ಎಂ.ಸಿ.ಎಂ.ಸಿ. ಸದಸ್ಯರಾದ ಕಾರಸಗೋಡು ಆರ್‌.ಡಿ.ಒ.ಪಿ.ಎ. ಅಬ್ದು ಸಮದ್‌, ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ. ಉಣ್ಣಿಕೃಷ್ಣನ್‌, ಜಿಲ್ಲಾ ಇನ್‌ ಫಾರ್ಮೆಟಿಕ್ಸ್‌ ಅಧಿಕಾರಿ ಕೆ.ರಾಜನ್‌, ಸ್ವತಂತ್ರ ಸದಸ್ಯ ಜಿ.ಬಿ. ವತ್ಸನ್‌, ಹೆಚ್ಚುವರಿ ಕಾನೂನು ಕಾರ್ಯದರ್ಶಿ (ನಿವೃತ್ತ) ಎಂ ಸೀತಾರಾಮ, ಕಾಸರಗೋಡು ಪ್ರಸ್‌ ಕ್ಲಬ್‌ ಅಧ್ಯಕ್ಷ ಟಿ.ಎ. ಶಾಫಿ ಉಪಸ್ಥಿತರಿದ್ದರು.

Advertisement

ಪೇಯ್ಡ್ ನ್ಯೂಸ್‌ ಎಂದರೇನು ?
ಹಣ ಯಾ ಇತರ ಸೌಲಭ್ಯಗಳನ್ನು ಪಡೆದು ಯಾವುದಾದರೂ ಮಾಧ್ಯಮಗಳಲ್ಲಿ ಪ್ರಕಟಿಸುವ ಯಾವ ಸುದ್ದಿಯೂ, ಅವಲೋಕನವೂ ಪೈಡ್ ನ್ಯೂಸ್‌ ಎಂದು ಪರಿಗಣಿಸಲಾಗುವುದು ಎಂದು ಪ್ರಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ನಿರ್ವಚನೆ ನೀಡಿದ್ದು , ಇದನ್ನು ಚುನಾವಣೆ ಆಯೋಗ ಅಂಗೀಕರಿಸಿದೆ.

ಪೇಯ್ಡ್ ನ್ಯೂಸ್‌ ವಿರುದ್ಧ ಜಾಗ್ರತೆ ಬೇಕು
ಪೈಡ್ ನ್ಯೂಸ್‌ ಜನತೆಯನ್ನು ತಪ್ಪು ದಾರಿಗೆಳೆಯುವ ಯತ್ನ ನಡೆಸುತ್ತಿದೆ. ಅವರ ಮಾಹಿತಿ ಹಕ್ಕನ್ನು ಕಸಿಯುವ ಪ್ರಯತ್ನವನ್ನೂ ಮಾಡುತ್ತದೆ. ಚುನಾವಣೆ ವೆಚ್ಚದ ನಿಯಂತ್ರಣವನ್ನು ಉಲ್ಲಂಘಿಸಲು ಇದನ್ನು ಗುಪ್ತ ಮಾರ್ಗವಾಗಿ ಬಳಸಲಾಗುತ್ತದೆ ಎಂದು ತಿಳಿಯಲಾಗಿದೆ.

ಯಾವುದಕ್ಕೆಲ್ಲ ಅನುಮತಿ ಬೇಕು ?
ಮೆಸೆಜ್‌ಗಳು, ಕಮೆಂಟ್‌ಗಳು, ಫೋಟೋಗಳು, ವೀಡಿಯೋ ಪೋಸ್ಟ್‌ಗಳು, ಬ್ಲೋಗ್‌ಗಳು, ವೆಬ್‌ ಸೈಟ್‌ಗಳು ಮೊದಲಾದೆಡೆ ನಡೆಸಲಾಗುವ ವಿಮರ್ಶೆಗಳು, ಸಾಮಾಜಿಕ ಜಾಲ ತಾಣಗಳಲ್ಲಿನ ಪೋಸ್ಟ್‌ಗಳು ಇತ್ಯಾದಿ ರಾಜಕೀಯ ಜಾಹೀರಾತು ಎಂದು ಪರಿಶೀಲಿಸಲಾಗುವುದಿಲ್ಲ. ಅದರೊಂದಿಗೆ ಇವುಗಳಿಗೆ ಮುಂಗಡ ಅನುಮತಿ ಅಗತ್ಯವಿಲ್ಲ . ಇದೇ ವೇಳೆ ಇ – ಪೇಪರ್‌ಗಳಲ್ಲಿ ನೀಡಲಾಗುವ ಜಾಹಿರಾತು ಸಮಿತಿಯ ಅನುಮತಿ ಪಡೆದಿರಬೇಕು.

ಭಾಗವಹಿಸಿದ ಪತ್ರಕರ್ತರು ಪರಿಣತರೊಂದಿಗೆ ಸಂವಾದ ನಡೆಸಿದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್‌ ಎಂ. ಸ್ವಾಗತಿಸಿದರು. ಜಿಲ್ಲಾ ಮಾಹಿತಿ ಕಚೇರಿ ಸಹಾಯಕ ಸಂಪಾದಕ ರಶೀದ್‌ ಬಾಬು ಪಿ. ವಂದಿಸಿದರು. ಜಿಲ್ಲಾ ಶುಚಿತ್ವ ಮಿಷನ್‌ ಸ್ವೀಪ್‌ ಕಾರ್ಯಕ್ರಮ ವತಿಯಿಂದ ಮತದಾನ ಜಾಗೃತಿ ವೀಡಿಯೋ ಪ್ರದರ್ಶನ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next