Advertisement

ಅನುಕಂಪದ ಅಲೆ ಇಂಪ್ಯಾಕ್ಟ್?

06:29 AM Mar 19, 2019 | |

ಕ್ಷೇತ್ರದ ವಸ್ತುಸ್ಥಿತಿ: ಈ ಕ್ಷೇತ್ರದಲ್ಲಿ ಬರುವ ಆರೂ ಬಿಬಿಎಂಪಿ ವಾರ್ಡ್‌ಗಳು ಬಿಜೆಪಿ ತೆಕ್ಕೆಯಲ್ಲಿವೆ. ಕಳೆದ ಮೂರೂ ವಿಧಾನಸಭಾ ಚುನಾವಣೆಗಳಲ್ಲಿ ಮತದಾರರು ಬಿಜೆಪಿ ಕೈಹಿಡಿದಿದ್ದಾರೆ. ಲೋಕಸಭೆ ವಿಚಾರದಲ್ಲೂ ಇಲ್ಲಿನ ಮತದಾರರ ಆಯ್ಕೆ ಕಮಲ. ಈ ನಿಟ್ಟಿನಲ್ಲಿ ಬಸವನಗುಡಿ ಬಿಜೆಪಿಯ ಭದ್ರಕೋಟೆ. ಇದರ ಪ್ರತಿಸ್ಪರ್ಧಿ ಕಾಂಗ್ರೆಸ್‌  ಪ್ರತಿ ಬಾರಿ ಅಭ್ಯರ್ಥಿ ಆಯ್ಕೆಯಲ್ಲಿಯೇ ಎಡವುತ್ತಿದೆ. ಪ್ರತಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊಸ ಮುಖಗಳು ಕಾಣಿಸಿಕೊಳ್ಳುತ್ತವೆ. ಸೋಲುಂಡ ನಂತರ ಅವರು ಜನರ ಸಂಪರ್ಕದಿಂದಲೂ ದೂರ ಉಳಿಯುತ್ತಾರೆ. ಇದು ಕೂಡ ಬಿಜೆಪಿಗೆ ವರವಾಗಿದೆ.

Advertisement

ಸಾಮಾನ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪರ ಶೇ.50ರಿಂದ 60ರಷ್ಟು ಮತಗಳು ಚಲಾವಣೆ ಆಗುತ್ತಿದ್ದವು. ಆದರೆ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದ್ದುದರಿಂದ ಈ ಮತದಾನ ಪ್ರಮಾಣ ಶೇ.68ಕ್ಕೆ ಏರಿಕೆಯಾಗಿತ್ತು. ಈ ಬಾರಿ ಕಣದ ಚಿತ್ರಣ ಬದಲಾಗಿದೆ. ಬಿಜೆಪಿಯಲ್ಲೂ ಲೋಕಸಭೆಗೆ ಹೊಸ ಮುಖ ಕಾಣಿಸಿಕೊಳ್ಳಲಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಜನಸಂಪರ್ಕ ಅಭಿಯಾನ, ಕಾರ್ಯಕರ್ತರಿಗೆ ತರಬೇತಿ ಶಿಬಿರಗಳ ಮೂಲಕ ಚುನಾವಣಾ ಪ್ರಚಾರಕ್ಕೆ ಪಡೆಯನ್ನು ಸಜ್ಜುಗೊಳಿಸುತ್ತಿದೆ.

ಆದರೆ, ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಅವರೇ ಬಹುತೇಕ ಇಲ್ಲಿ ಕಣಕ್ಕಿಳಿಯಲಿದ್ದಾರೆ. ಅನಂತಕುಮಾರ್‌ ಅವಧಿಯಲ್ಲಿ ಆಗಿರುವ ಜನೌಷಧ ಕೇಂದ್ರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಬಿಜೆಪಿ ಗೆಲುವಿಗೆ ವರವಾಗಲಿವೆ. ಜತೆಗೆ ಪರ ಅನುಕಂಪದ ಅಲೆ ಕೆಲಸ ಮಾಡಲಿದೆ ಎಂಬ ವಿಶ್ವಾಸ ಬಿಜೆಪಿಯದ್ದು. ಅನುಕಂಪದ ಅಲೆ ಯಾವಾಗಲೂ ಕೆಲಸ ಮಾಡುವುದಿಲ್ಲ. ಉದಾಹರಣೆಗೆ ಜಯನಗರ ವಿಧಾನಸಭೆ ಕ್ಷೇತ್ರ ನಮ್ಮ ಮುಂದಿದೆ ಎಂಬ ವಾದ ಕಾಂಗ್ರೆಸ್‌ನದ್ದಾಗಿದೆ.

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಒಟ್ಟಾರೆ ನೀಡಿದ ಅನುದಾನ 3.52 ಕೋಟಿ 
-70 ಕಡೆ 93 ಸಿಸಿಟಿವಿ ಅಳವಡಿಕೆ. ಅಪರಾಧ ಪ್ರಕರಣ ಶೇ.50ರಷ್ಟು ಇಳಿಮುಖ
-ರಾಜ್ಯದ ಮೊದಲ ಜನೌಷಧ ಕೇಂದ್ರ ಸ್ಥಾಪನೆ
-3 ಶುದ್ಧ ಕುಡಿಯುವ ನೀರಿನ ಘಟಕಗಳು
-ಶಾಲಾ ಕೊಠಡಿಗಳ ನಿರ್ಮಾಣ

ನಿರೀಕ್ಷೆಗಳು
-ಹನುಮಂತನಗರ ಮುಖ್ಯರಸ್ತೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಂಚಾರದಟ್ಟಣೆ ಸಮಸ್ಯೆ ನಿವಾರಣೆ

Advertisement

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
-ವಿಧಾನಸಭಾ ಕ್ಷೇತ್ರ- ಬಸವನಗುಡಿ
-ವಾರ್ಡ್‌ಗಳು- 6
-ಬಿಜೆಪಿ- 6
-ಕಾಂಗ್ರೆಸ್‌- 0
-ಜೆಡಿಎಸ್‌- 0

-ಜನಸಂಖ್ಯೆ- 3,49,297
-ಮತದಾರರ ಸಂಖ್ಯೆ- 2,30,175
-ಪುರುಷರು- 1,17,851
-ಮಹಿಳೆಯರು- 1,12,324

2014ರ ಚುನಾವಣೆಯಲ್ಲಿ
ಚಲಾವಣೆಯಾದ ಮತಗಳು- 1,22,231 (ಶೇ. 55.46)
ಬಿಜೆಪಿ ಪಡೆದ ಮತಗಳು- 84,149 (ಶೇ. 68.8)
ಕಾಂಗ್ರೆಸ್‌ ಪಡೆದ ಮತಗಳು- 30,585 (ಶೇ. 25)
ಜೆಡಿಎಸ್‌ ಪಡೆದ ಮತಗಳು- 3,725 (ಶೇ. 3)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಶಾಸಕ- ಎಲ್‌.ಎ. ರವಿಸುಬ್ರಹ್ಮಣ್ಯ (ಬಿಜೆಪಿ)
-ಪಾಲಿಕೆಯಲ್ಲಿ ಕಾಂಗ್ರೆಸ್‌ ಸದಸ್ಯರು- 1
-ಬಿಜೆಪಿ ಸದಸ್ಯರು- 4
-ಜೆಡಿಎಸ್‌- 1

ಮಾಹಿತಿ: ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next