Advertisement

ಸಾಮೂಹಿಕ ದಲಿತ ಸಂಘಟನೆಗಳಿಂದ ಸಾಂಕೇತಿಕ ಪ್ರತಿಭಟನೆ

08:23 AM Feb 01, 2019 | Team Udayavani |

ಕೆಂಭಾವಿ: ಸಂವಿಧಾನ ಸಮರ್ಪಣಾ ದಿನದಂದು ಶಹಾಪುರ ತಾಲೂಕಿನ ಭೀಮರಾಯನಗುಡಿ ಪೊಲೀಸ್‌ ಠಾಣೆಯಲ್ಲಿ, ಹತ್ತಿಗುಡೂರ ಜೆಸ್ಕಾಂ ಕಚೇರಿಯಲ್ಲಿ ಹಾಗೂ ಸುರಪುರ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಡಾ| ಅಂಬೇಡ್ಕರ್‌ ಅವರ ಭಾವಚಿತ್ರ ಇಡದೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ಪಟ್ಟಣದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಸಾಮೂಹಿಕ ದಲಿತ ಸಂಘಟನೆಗಳ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು.

Advertisement

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಶರಣಪ್ಪ ಗಾಯಕವಾಡ, ಇತ್ತೀಚಿಗೆ ಸರ್ಕಾರಿ ಸಮಾರಂಭಗಳಲ್ಲಿ ಹಾಗೂ ಖಾಸಗಿ ರಂಗಗಳಲ್ಲಿ ಡಾ| ಅಂಬೇಡ್ಕರ್‌ ಅವರಿಗೆ ಅಪಮಾನ ಪ್ರಕರಣ ಜಾಸ್ತಿಯಾಗುತ್ತಿದ್ದು, ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಎತ್ತಿ ತೋರಿಸುತ್ತಿದೆ. ಇತ್ತೀಚಿಗೆ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ| ಅಂಬೇಡ್ಕರ್‌ ಭಾವಚಿತ್ರ ಇಡದೆ ಅಗೌರವ ತೋರಿದ ಭೀ. ಗುಡಿ ಹಾಗೂ ಹತ್ತಿಗುಡೂರ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಕ್ಷಮಾಪಣೆ ಕೇಳಬೇಕು ಮತ್ತು ಸುರಪುರ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಡಾ| ಅಂಬೇಡ್ಕರ್‌ ಅವರಿಗೆ ಅಗೌರವ ತೋರಿದ್ದು, ರಾಜಕೀಯ ನಾಯಕರೂ ಈ ಕುರಿತು ಕ್ಷಮೆ ಯಾಚಿಸಬೇಕು ಎಂದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕಂದಾಯ ಅಧಿಕಾರಿ ರಾಜಾಸಾಬ ಅವರ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಲಾಲಪ್ಪ ಹೊಸಮನಿ, ಸುರೇಶ ಮಾಳಳ್ಳಿಕರ್‌, ಜುಮ್ಮಣ್ಣ ಕಟ್ಟಿಮನಿ, ಶಿವಶರಣ ನಾಗರೆಡ್ಡಿ, ಧರ್ಮಣ್ಣ ಹೊಸಮನಿ, ಬಸವಣ್ಣೆಪ್ಪ, ನಿಂಗರಾಜ ಮೂಲಿಮನಿ, ಭೀಮಣ್ಣ ಬಾಚಿಮಟ್ಟಿ, ಶಿವಪ್ಪ ಕಂಬಾರ, ಸಿದ್ದಪ್ಪ ಹಾದಿಮನಿ, ಹುಲಗಪ್ಪ ಸೇರಿದಂತೆ ವಿವಿಧ ಸಾಮೂಹಿಕ ದಲಿತ ಸಂಘಟನೆಗಳ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next