Advertisement
ಗುರುವಾರ ನಡೆದ “ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗೆ 175 ರನ್ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ 18.4 ಓವರ್‌ಗೆ 3 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿದೆ. ಮುಂಬೈ ಪರ ಸಿದ್ದೇಶ್ ಲಾಡ್ (52 ರನ್), ಸುರ್ಯಪ್ರಕಾಶ್ ಯಾದವ್ (59 ರನ್) ಅರ್ಧಶತಕ ಬಾರಿಸಿದ್ದರು. ಕರ್ನಾಟಕದ ಪರ ಸ್ಟುವರ್ಟ್ ಬಿನ್ನಿ 3 ವಿಕೆಟ್ ಪಡೆದಿದ್ದರು. ಗುರಿ ಬೆನ್ನುಹತ್ತಿದ ಕರ್ನಾಟಕದ ಪರ ಮಾಯಾಂಕ್ ಅಗರ್ವಾಲ್ 41 ಎಸೆತದಲ್ಲಿ 77 ರನ್ ಬಾರಿಸಿ ಔಟ್ ಆದರು. ಉಳಿದಂತೆ ಪವನ್ ದೇಶಪಾಂಡೆ (ಅಜೇಯ 48ರನ್), ಕರುಣ್ ನಾಯರ್ (30 ರನ್) ಬಾರಿಸಿದರು. ಕರುಣ್ ನಾಯರ್ ಇದಕ್ಕೂ ಮುನ್ನ ನಡೆದ ಜಾರ್ಖಂಡ್ ವಿರುದ್ಧದ ಪಂದ್ಯ ದಲ್ಲಿ 52 ಎಸೆತದಲ್ಲಿ 100 ರನ್ ಬಾರಿಸಿದ್ದರು. ಎರಡೂ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ದೆಹಲಿ ಮತ್ತು ರಾಜಸ್ಥಾನ ತಂಡಗಳು ಫೈನಲ್ ಪ್ರವೇಶಿಸಿವೆ.
Advertisement
ಮುಷ್ತಾಕ್ ಅಲಿ ಟಿ20: ಗೆದ್ದು ಕೂಟ ಮುಗಿಸಿದ ವಿನಯ್ ಪಡೆ
10:09 AM Jan 26, 2018 | |
Advertisement
Udayavani is now on Telegram. Click here to join our channel and stay updated with the latest news.