Advertisement

ಟಿ20 ಇತಿಹಾಸದ 2ನೇ ವೇಗದ ಶತಕ ಸಿಡಿಸಿದ ರಿಷಭ್‌

06:35 AM Jan 15, 2018 | Team Udayavani |

ನವದೆಹಲಿ: ಹಿಮಾಚಲ ಪ್ರದೇಶ ವಿರುದ್ಧ ನಡೆದ ಸೈಯದ್‌ ಮುಷ್ತಾಕ್‌ ಅಲಿ ಉತ್ತರ ವಲಯ ಟಿ20 ಟೂರ್ನಿಯಲ್ಲಿ ದೆಹಲಿಯ ರಿಷಭ್‌ ಪಂತ್‌ ಕೇವಲ 32 ಎಸೆತದಲ್ಲಿ ಶತಕ ಸಿಡಿಸಿದ್ದಾರೆ.

Advertisement

ಇದು ಟಿ20 ಇತಿಹಾಸದಲ್ಲಿಯೇ ಎರಡನೇ ಅತೀವೇಗದ ಶತಕವಾಗಿದೆ. ಐಪಿಎಲ್‌ನಲ್ಲಿ ಕೇವಲ 30 ಎಸೆತದಲ್ಲಿ ಶತಕ
ಬಾರಿಸಿರುವ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಅಗ್ರಸ್ಥಾನದಲ್ಲಿದ್ದಾರೆ.

ಹಿಮಾಚಲ ಪ್ರದೇಶದ ಬೌಲರ್‌ಗಳನ್ನು ಅಕ್ಷರಶಃ ಬೆಂಡೆತ್ತಿದ್ದ ಪಂತ್‌ ಅಂತಿಮವಾಗಿ 38 ಎಸೆತದಲ್ಲಿ ಅಜೇಯ 116 
ರನ್‌ ಬಾರಿಸಿದರು. ಅದರಲ್ಲಿ 8 ಬೌಂಡರಿ, 12 ಸಿಕ್ಸರ್‌ ಸೇರಿತ್ತು. ಬೌಂಡರಿ, ಸಿಕ್ಸರ್‌ಗಳ ಮೂಲಕವೇ 104 ರನ್‌ ದಾಖಲಾಗಿದೆ. ಈ ಪಂದ್ಯದಲ್ಲಿ ದೆಹಲಿ 10 ವಿಕೆಟ್‌ ಗೆಲುವು ಸಾಧಿಸಿದೆ.

ಪಂತ್‌ 2016-17ನೇ ರಣಜಿ ಋತುವಿನಲ್ಲಿ ಜಾರ್ಖಂಡ್‌ ವಿರುದ್ಧ 48 ಎಸೆತದಲ್ಲಿ ಶತಕ ಸಿಡಿಸಿ ಪ್ರಥಮ ದರ್ಜೆಯಲ್ಲಿ
ಅತೀ ವೇಗದ ಶತಕ ಎಂಬ ದಾಖಲೆ ನಿರ್ಮಿಸಿದ್ದಾರೆ. ಅ-19 ವಿಶ್ವಕಪ್‌ನಲ್ಲಿ ನೇಪಾಳ ವಿರುದಟಛಿ 18 ಎಸೆತದಲ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಇದು ಅ-19 ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿಯೇ ಅತೀ ವೇಗದ ಅರ್ಧಶತಕವಾಗಿದೆ.

30 ಎಸೆತದಲ್ಲೇ ಗೇಲ್‌ ಶತಕ
ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ 30 ಎಸೆತದಲ್ಲಿಯೇ ಶತಕ ಬಾರಿಸಿ ದಾಖಲೆ
ನಿರ್ಮಿಸಿದ್ದರು. 2013ರ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದಲ್ಲಿ ಆಡಿದ ಗೇಲ್‌ ಪುಣೆ ವಾರಿಯರ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಆ ಪಂದ್ಯದಲ್ಲಿ ಗೇಲ್‌ ಒಟ್ಟು 66 ಎಸೆತದಲ್ಲಿ ಅಜೇಯ 175 ರನ್‌ ಬಾರಿಸಿದ್ದರು. ಅದರಲ್ಲಿ 13 ಬೌಂಡರಿ, 17 ಸಿಕ್ಸರ್‌ ಸೇರಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next