Advertisement
ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಿಸಲಿದೆ. ಬೆಂಗಳೂರು ಹೊರವಲಯವಾದ ಆಲೂರಿನಲ್ಲಿ ಪಂದ್ಯ ನಡೆಯಲಿದೆ. ತಂಡಕ್ಕೆ ಕರುಣ್ ನಾಯರ್ ನಾಯಕರಾಗಿದ್ದಾರೆ.
Related Articles
Advertisement
ಯುವ ಕ್ರಿಕೆಟಿಗರತ್ತ ಚಿತ್ತ :
ಫೆಬ್ರವರಿಯಲ್ಲಿ ಐಪಿಎಲ್ ಹರಾಜು ನಡೆಯ ಲಿರುವ ಕಾರಣ ದೇಶೀಯ ಯುವ ಕ್ರಿಕೆಟಿಗರ ನಿರ್ವಹಣೆಯತ್ತ ಎಲ್ಲರ ಚಿತ್ತ ಇರಲಿದೆ. ಈ ವರ್ಷದ ಅಂತ್ಯದಲ್ಲಿ ಟಿ20 ವಿಶ್ವಕಪ್ ಕೂಟ ಭಾರತದಲ್ಲಿಯೇ ನಡೆಯುವ ಕಾರಣ ಈ ಕೂಟ ಕ್ರಿಕೆಟಿಗರ ಪಾಲಿಗೆ ಮಹತ್ವದ್ದಾಗಿದೆ. ಇಲ್ಲಿ ಕ್ರಿಕೆಟಿಗರು ನೀಡುವ ಸಾಧನೆಯ ಆಧಾರದಲ್ಲಿ ಹೊಸ ಆಯ್ಕೆ ಸಮಿತಿಯು ವಿಶ್ವಕಪ್‌ಗೆ ತಂಡವನ್ನು ರಚಿಸುವ ಸಾಧ್ಯತೆಯಿದೆ.
ಅರ್ಜುನ್ ತೆಂಡುಲ್ಕರ್ ಆಡುವ ಸಾಧ್ಯತೆ :
ಇದೇ ಮೊದಲ ಬಾರಿ ಮುಂಬಯಿ ಸೀನಿಯರ್ ತಂಡಕ್ಕೆ ಯುವ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂಬಯಿ ತಂಡವನ್ನು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.
ಆಟಗಾರರ ದೂರು :
ಈ ಕೂಟ ಆರಂಭವಾಗುವ ಮೊದಲೇ ಕೆಲವು ಆಟಗಾರರು ದಕ್ಷಿಣ ಮುಂಬಯಿಯ ಪ್ರಮುಖ ಹೊಟೇಲ್‌ನಲ್ಲಿ ನಮಗೆ ಕಳಪೆ ಗುಣಮಟ್ಟದ ಆಹಾರ ನೀಡಿದ್ದಾರೆ ಎಂದು ದೂರು ನೀಡಿರುವ ಘಟನೆ ನಡೆದಿದೆ. ಇಷ್ಟು ಮಾತ್ರವಲ್ಲದೇ ಪ್ಲೇಟ್ ಬಣದಲ್ಲಿ ಆಡಲಿರುವ ಮೂರು ತಂಡಗಳು ಉಳಿದುಕೊಂಡಿರುವ ಚೆನ್ನೈಯ ಪ್ರಮುಖ ಹೊಟೇಲ್‌ನ ಸಿಬಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದು ಗೊಂದಲಕ್ಕೆ ಕಾರಣವಾಗಿದೆ.