Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 : ಕರ್ನಾಟಕಕ್ಕೆ ರೋಚಕ ಜಯ ತಂದಿತ್ತ ಜೋಶಿ

12:56 AM Jan 17, 2021 | Team Udayavani |

ಬೆಂಗಳೂರು: ಇನ್ನೇನು ರೈಲ್ವೇಸ್‌ ವಿರುದ್ಧ ಹಳಿ ತಪ್ಪಿತು ಎನ್ನುವ ಹಂತದಲ್ಲಿ ಅಮೋಘ ಪ್ರತಿಹೋರಾಟ ಸಂಘಟಿಸಿದ ಅನಿರುದ್ಧ ಜೋಶಿ ಶನಿವಾರದ “ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20 ಪಂದ್ಯದಲ್ಲಿ ಕರ್ನಾಟಕಕ್ಕೆ 2 ವಿಕೆಟ್‌ಗಳ ರೋಚಕ ಗೆಲುವು ತಂದಿತ್ತಿದ್ದಾರೆ.

Advertisement

ಆಲೂರಿನ ಕೆಎಸ್‌ಸಿಎ ಕ್ರಿಕೆಟ್‌ ಗ್ರೌಂಡ್‌(2)ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರೈಲ್ವೇಸ್‌ 5 ವಿಕೆಟಿಗೆ 152 ರನ್‌ ಪೇರಿಸಿದರೆ, ಕರ್ನಾಟಕ 19.4 ಓವರ್‌ಗಳಲ್ಲಿ 8 ವಿಕೆಟಿಗೆ 158 ರನ್‌ ಬಾರಿಸಿ ಜಯ ಸಾಧಿಸಿತು. ಇದು “ಎಲೈಟ್‌ ಎ’ ವಿಭಾಗದ 4 ಪಂದ್ಯಗಳಲ್ಲಿ ಕರ್ನಾಟಕಕ್ಕೆ ಒಲಿದ 3ನೇ ಜಯವಾಗಿದೆ. 12 ಅಂಕ ಹೊಂದಿರುವ ಕರುಣ್‌ ನಾಯರ್‌ ಬಳಗ ದ್ವಿತೀಯ ಸ್ಥಾನಿಯಾಗಿದೆ. ನಾಲ್ಕೂ ಪಂದ್ಯ ಗೆದ್ದಿರುವ ಪಂಜಾಬ್‌ ಅಗ್ರಸ್ಥಾನದಲ್ಲಿದೆ (16 ಅಂಕ).

ಜೋಶಿ ಅಮೋಘ ಆಟ :

14ನೇ ಓವರಿನಲ್ಲಿ 93ಕ್ಕೆ 6 ವಿಕೆಟ್‌ ಕಳೆದುಕೊಂಡ ಕರ್ನಾಟಕ ಸೋಲಿನ ಭೀತಿಯಲ್ಲಿತ್ತು. ಈ ಹಂತದಲ್ಲಿ ಕ್ರೀಸಿಗೆ ಅಂಟಿಕೊಂಡು ನಿಂತ ಅನಿರುದ್ಧ ಜೋಶಿ ರೈಲ್ವೇಸ್‌ ಆಕ್ರಮಣಕ್ಕೆ ದಿಟ್ಟ ಉತ್ತರ ನೀಡತೊಡಗಿದರು. ಏಕಾಂಗಿ ಯಾಗಿ ಹೋರಾಡಿದ ಜೋಶಿ ಅಜೇಯ 64 ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. 40 ಎಸೆತಗಳ ಈ ಆಕ್ರಮಣಕಾರಿ ಆಟದ ವೇಳೆ 4 ಸಿಕ್ಸರ್‌, 3 ಬೌಂಡರಿ ಸಿಡಿಯ ಲ್ಪಟ್ಟಿತು. ಜೋಶಿ ಅಬ್ಬರಿಸುತ್ತಿದ್ದ ವೇಳೆ ಬೆಂಬಲ ನೀಡಿದ್ದು ಕೆ. ಗೌತಮ್‌ ಮಾತ್ರ (12). ಈ ಜೋಡಿಯಿಂದ 7ನೇ ವಿಕೆಟಿಗೆ 38 ರನ್‌ ಒಟ್ಟುಗೂಡಿತು. ಅಗ್ರ ಕ್ರಮಾಂಕದಲ್ಲಿ ಪಡಿಕ್ಕಲ್‌ 37 (32 ಎಸೆತ, 3 ಬೌಂಡರಿ, 2 ಸಿಕ್ಸರ್‌) ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌ :

Advertisement

ರೈಲ್ವೇಸ್‌-5 ವಿಕೆಟಿಗೆ 152 (ಶಿವಂ ಚೌಧರಿ 48, ಪ್ರಥಮ್‌ ಸಿಂಗ್‌ 41, ಹರ್ಷ ತ್ಯಾಗಿ ಔಟಾಗದೆ 33, ಪ್ರಸಿದ್ಧ್ ಕೃಷ್ಣ 25ಕ್ಕೆ 2, ಶ್ರೇಯಸ್‌ ಗೋಪಾಲ್‌ 27ಕ್ಕೆ 2). ಕರ್ನಾಟಕ-19. 4 ಓವರ್‌ಗಳಲ್ಲಿ 8 ವಿಕೆಟಿಗೆ 158 (ಜೋಶಿ ಔಟಾಗದೆ 64, ಪಡಿಕ್ಕಲ್‌ 37, ನಾಯರ್‌ 15, ಕದಂ 14, ಪ್ರದೀಪ್‌ ಪೂಜಾರ್‌ 19ಕ್ಕೆ 3, ದೃಷ್ಟಾಂತ್‌ ಸೋನಿ 28ಕ್ಕೆ 3, ಶಿವೇಂದ್ರ ಸಿಂಗ್‌ 33ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next