Advertisement

ಸೈಯದ್‌ ಮೋದಿ ಬ್ಯಾಡ್ಮಿಂಟನ್‌: ಸೈನಾ, ಸಮೀರ್‌ ಸೆಮೀಸ್‌ಗೆ

06:00 AM Nov 25, 2018 | Team Udayavani |

ನವದೆಹಲಿ: ಸೈನಾ ನೆಹ್ವಾಲ್‌ ಹಾಗೂ ಸಮೀರ್‌ ವರ್ಮ ಸೈಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೂಟದ ಸಿಂಗಲ್ಸ್‌ನಲ್ಲಿ ಕ್ರಮವಾಗಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಪಿ.ಕಶ್ಯಪ್‌, ಸಾಯಿ ಪ್ರಣೀತ್‌ ಸೋಲುಂಡು ಹೊರ ನಡೆದಿದ್ದಾರೆ.

Advertisement

ಸೈನಾಗೆ ಗೆಲುವು: ಸೈನಾ ನೆಹ್ವಾಲ್‌ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ ಪಂದ್ಯದ 36 ನಿಮಿಷದ ಅಲ್ಪ ಹೋರಾಟದಲ್ಲಿ ತಮ್ಮದೇ ದೇಶದ ಆಟಗಾರ್ತಿ ರುತುಪರ್ಣಾ ದಾಸ್‌ ವಿರುದ್ಧ 21-19, 21-14 ಗೇಮ್‌ಗಳ ಅಂತರದಿಂದ ಗೆಲುವು ದಾಖಲಿಸಿದರು. ಮೊದಲ ಗೇಮ್‌ನಲ್ಲಿ ಸೈನಾಗೆ ರುತುಪರ್ಣಾ ದಾಸ್‌ ಕಠಿಣ ಸ್ಪರ್ಧೆ ಒಡ್ಡಿದರು. 21-19ರಿಂದ 1-0 ಹಿನ್ನಡೆ ಅನುಭವಿಸಿದರು. ಎರಡನೇ ಗೇಮ್‌ನಲ್ಲೂ ಅತ್ಯುತ್ತಮ ನಿರ್ವಹಣೆ ನೀಡುವ ಮೂಲಕ  ರುತುಪರ್ಣಾ ಸೈನಾ ಬೆವರಿಳಿಸಿದರು. ಎಲ್ಲ ಅಡೆತಡೆಗಳನ್ನು ಮೆಟ್ಟಿ 2-0 ಅಂತರದಿಂದ ಸೈನಾ ಸೆಮೀಸ್‌ಗೆàರಿದರು. ಮುಂದಿನ ಸುತ್ತಿನಲ್ಲಿ ಸೈನಾ ನೆಹ್ವಾಲ್‌ ಇಂಡೋನೇಷ್ಯಾದ ರುಸೆಲಿ ಹಾರ್ಟವಾನ್‌ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

ಸಮೀರ್‌ಗೆ ಭಾಗ್ಯ: ಸಮೀರ್‌ ವರ್ಮ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಝೋವ್‌ ಝಿಕ್‌ ಅವರ ವಿರುದ್ಧ 21-18, 21-16, 21-11 ಗೇಮ್‌ಗಳ ಅಂತರದಿಂದ ಗೆದ್ದು ಸೆಮಿಫೈನಲ್‌ಗೆ ಏರಿದರು.

ಅಶ್ವಿ‌ನಿ ಜೋಡಿಗೆ ಸೆಮೀಸ್‌ಗೆ
ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ – ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ 20-22, 21-17, 21-11 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿ ಸೆಮೀಸ್‌ ಗೇರಿದೆ. ಮಹಿಳಾ ಡಬಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಪಂದ್ಯದಲ್ಲಿ ಸಿಕಿ ರೆಡ್ಡಿ ಜತೆಗೂಡಿ ಆಡಿದ ಅಶ್ವಿ‌ನಿ ಪೊನ್ನಪ್ಪ ಗೆದ್ದು ಸೆಮೀಸ್‌ಗೆàರಿದ್ದಾರೆ. ಅವರು 19-21, 21-8, 21-18 ಅಂತರದಿಂದ ಇಂಡೋನೇಷ್ಯಾದ ತನಿಯಾ-ವನಿಯಾ ವಿರುದ್ಧ ಗೆಲುವು ಸಾಧಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next