ಸಿಡ್ನಿ: ಮಳೆಯಿಂದ ತೊಂದರೆಗೊಳಗಾದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದೆ.
ಪಂದ್ಯದ ನಾಲ್ಕನೇ ದಿನದಾಟದಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಝಲ್‌ವುಡ್ ಬಿಗು ದಾಳಿ ಸಂಘಟಿಸಿದ್ದರಿಂದ ದಕ್ಷಿಣ ಆಫ್ರಿಕಾ ಕೇವಲ 149 ರನ್ನಿಗೆ 6 ವಿಕೆಟ್ ಕಳೆದುಕೊಂಡಿದೆ.
ತಂಡವಿನ್ನೂ ಫಾಲೋಆನ್ ಭೀತಿಯಿಂದ ಪಾರಾಗಿಲ್ಲ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ದಕಿಣ ಆಫ್ರಿಕಾ ಸೋಲು ತಪ್ಪಿಸಲು ಪ್ರಯತ್ನಿಸಬೇಕಾಗಿದೆ.
ಭಾರೀ ಮಳೆಯಿಂದ ಮೂರನೇ ದಿನದಾಟ ಪೂರ್ತಿ ಸಹಿತ ನಾಲ್ಕು ಅವಧಿಯ ಆಟ ನಷ್ಟವಾಗಿದ್ದರೂ ಪ್ರವಾಸಿ ತಂಡಕ್ಕೆ ಫಾಲೋಆನ್ ಹೇರಿ ಗೆಲುವು ಸಾಧಿಸುವ ವಿಶ್ವಾಸವನ್ನು ಆಸ್ಟ್ರೇಲಿಯ ತಂಡ ಇಟ್ಟುಕೊಂಡಿದೆ. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಸಲು ಇನ್ನೂ 326 ರನ್ ಗಳಿಸಬೇಕಾಗಿದೆ. ಅಂತಿಮ ದಿನ 98 ಓವರ್‌ಗಳ ಆಟ ನಡೆಯಲಿದ್ದು ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
Related Articles
4ನೇ ದಿನದ ಅಂತಿಮ ಅವಧಿಯಲ್ಲಿ ಖಾಯ ಝಾಂಡೊ ಮತ್ತು ಕೈಲ್ ವೆರೆಯ್ನೆ ಅವರ ವಿಕೆಟ್ ಬಿದ್ದ ಕಾರಣ ದಕ್ಷಿಣ ಆಫ್ರಿಕಾ ಕುಸಿಯಿತು. ಈ ಎರಡು ವಿಕೆಟನ್ನು ಕಮಿನ್ಸ್ ಹಾರಿಸಿದ್ದರು. ಇದರಿಂದ ಆಸ್ಟ್ರೇಲಿಯದ ಗೆಲುವಿನ ಆಸೆ ಚಿಗುರೊಡೆದಿತ್ತು. ತಂಡವೀಗ ಸರಣಿ ಕ್ಲೀನ್‌ಸಿÌàಪ್‌ಗೆçಯುವ ಭರವಸೆಯಲ್ಲಿದ್ದು ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲಿನಲ್ಲಿ ಸ್ಥಾನ ಪಡೆಯಲು ಹಾತೊರೆಯುತ್ತಿದೆ.
ನಾಲ್ಕನೇ ದಿನವೂ ಮಳೆ ತೊಂದರೆ ನೀಡಿದ ಬಳಿಕ ಕಮಿನ್ಸ್ ಮತ್ತು ಹ್ಯಾಝಲ್‌ವುಡ್ ಬಿಗು ದಾಳಿ ಸಂಘಟಿಸಿದ್ದರಿಂದ ದಕ್ಷಿಣ ಆಫ್ರಿಕಾ ರನ್ ಗಳಿಸಲು ಒದ್ದಾಡಿತು. ತೆಂಬಾ ಬವುಮ ಮತ್ತು ಖಾಯ ಝಾಂಡೊ ಮಾತ್ರ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ಕಮಿನ್ಸ್ 29 ರನ್ನಿಗೆ 3 ವಿಕೆಟ್ ಕಿತ್ತರೆ ಹ್ಯಾಝಲ್‌ವುಡ್ 29 ರನ್ನಿಗೆ 2 ವಿಕೆಟ್ ಉರುಳಿಸಿದರು.
ಖ್ವಾಜಾ ಅಜೇಯ 195
ಈ ಮೊದಲು ಆಸ್ಟ್ರೇಲಿಯ ನಾಯಕ ಕಮಿನ್ಸ್ ಅವರು ಆಸ್ಟ್ರೇಲಿಯದ ಮೊತ್ತ 4 ವಿಕೆಟಿಗೆ 475 ರನ್ ಇದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಇದರಿಂದ 195 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಉಸ್ಮಾನ್ ಖ್ವಾಜಾ ಅವರು ದ್ವಿಶತಕ ಪೂರ್ತಿಗೊಳಿಸುವ ಅವಕಾಶ ಕಳೆದುಕೊಂಡರು. ಇದು ಆಟಗಾರನೋರ್ವ 190 ಪ್ಲಸ್ ರನ್ ಗಳಿಸಿದ ವೇಳೆ ತಂಡದ ನಾಯಕರು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಮೂರನೇ ನಿದರ್ಶನವಾಗಿದೆ. ಈ ಮೊದಲು ಫ್ರ್ಯಾಂಕ್ ವೊರೆಲ್ ಮತ್ತು ಸಚಿನ್ ತೆಂಡುಲ್ಕರ್ 190 ಪ್ಲಸ್ ರನ್ ಗಳಿಸಿದ್ದ ವೇಳೆ ತಂಡದ ನಾಯಕರು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು.