Advertisement

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

01:23 AM Apr 11, 2024 | Team Udayavani |

ಪರ್ತ್‌: ಆತಿಥೇಯ ಆಸ್ಟ್ರೇಲಿಯ ವಿರುದ್ಧದ 3ನೇ ಹಾಕಿ ಟೆಸ್ಟ್‌ ಪಂದ್ಯದಲ್ಲೂ ಭಾರತ ಸೋಲನುಭವಿಸಿ ಸರಣಿ ಕಳೆದುಕೊಂಡಿದೆ. ಬುಧವಾರದ ಮುಖಾಮುಖಿಯಲ್ಲಿ ಆಸೀಸ್‌ 2-1 ಅಂತರದ ಜಯ ಸಾಧಿಸಿತು.

Advertisement

5 ಪಂದ್ಯಗಳ ಸರಣಿಯ ಮೊದ ಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯ 5-1 ಹಾಗೂ 4-2 ಅಂತರದಿಂದ ಜಯ ಸಾಧಿಸಿತ್ತು. 3ನೇ ಮುಖಾಮುಖಿಯಲ್ಲಿ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರ ಅಮೋಘ ಪ್ರದರ್ಶನದ ಹೊರ ತಾಗಿಯೂ ಭಾರತಕ್ಕೆ ಪಂದ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ.

ಮೊದಲೆರಡು ಕ್ವಾರ್ಟರ್‌ಗಳಲ್ಲಿ ಗೋಲು ದಾಖಲಾಗಲಿಲ್ಲ. 3ನೇ ಕ್ವಾರ್ಟರ್‌ನ 11ನೇ ನಿಮಿಷದಲ್ಲಿ ಜುಗ್ರಾಜ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಒಂದನ್ನು ಯಶಸ್ವಿಯಾಗಿ ಗೋಲಾಗಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ 44ನೇ ಹಾಗೂ 49ನೇ ನಿಮಿಷಗಳಲ್ಲಿ ಜೆರೆಮಿ ಹೇವಾರ್ಡ್‌ ಅವಳಿ ಗೋಲು ಸಿಡಿಸಿ ಆಸ್ಟ್ರೇಲಿಯಕ್ಕೆ ಮೇಲುಗೈ ಒದಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next