Advertisement

ಪಂತ್, ಪೂಜಾರ ವೀರೋಚಿತ ಹೋರಾಟ ಅಂತ್ಯ: ಭಾರ ಹೊರಬಹುದೇ ಹನುಮ?

09:57 AM Jan 11, 2021 | Team Udayavani |

ಸಿಡ್ನಿ: ಸೋಲುವ ಭೀತಿಯಲ್ಲಿದ್ದ ತಂಡವನ್ನು ತಮ್ಮ ವೀರೋಚಿತ ಬ್ಯಾಟಿಂಗ್ ಸಾಹಸದಿಂದ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರ ಮೇಲಕ್ಕೆತ್ತಿದ್ದು, ಆದರೆ ಪಂದ್ಯ ರೋಚಕತೆ ಮುಂದುವರಿದಿದೆ. ಭಾರತ  ತಂಡ ಐದು ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿದ್ದು, ಜಯ ಗಳಿಸಲು ಇನ್ನೂ 127 ರನ್ ಗಳಿಸಬೇಕಿದ್ದು,  ಡ್ರಾ ಮಾಡಲು 36 ಓವರ್ ಆಡಬೇಕಿದೆ.

Advertisement

ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಪಂತ್ 97 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಮೂರು ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದ ಪಂತ್ ಶತಕದ ಹೊಸ್ತಿಲಲ್ಲಿ ಎಡವಿದರು.

ಪಂತ್ ಮತ್ತು ಪೂಜಾರ ಶತಕದ ಜೊತೆಯಾಟವಾಡಿದರು. ರಕ್ಷಾಣಾತ್ಮಕವಾಗಿ ಆಡಿದ ಪೂಜಾರ 77 ರನ್ ಗಳಿಸಿ ಔಟಾದರು. ಇದೇ ವೇಳೆ ಪೂಜಾರ ಟೆಸ್ಟ್ ಕ್ರಿಕೆಟ್ ನಲ್ಲಿ ಆರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.

ಸದ್ಯ ಹನುಮ ವಿಹಾರಿ ಮತ್ತು ಅಶ್ವಿನ್ ಕ್ರೀಸ್ ನಲ್ಲಿದ್ದಾರೆ. ವಿಹಾರಿ ನಾಲ್ಕು ರನ್ ಗಳಿಸಿದ್ದು, ಅಶ್ವಿನ್ ಏಳು ರನ್ ಗಳಿಸಿ ಆಡುತ್ತಿದ್ದಾರೆ. ಜಡೇಜಾ ಕೂಡಾ ಗಾಯಗೊಂಡಿದ್ದು, ಆಡುವ ಬಗ್ಗೆ ಇನ್ನೂ ಖಚಿತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next