Advertisement

ದಿಲ್ಲಿ ಆಯ್ತು, ಈಗ ಸಿಡ್ನಿಯಲ್ಲೂ ವಾಯುಮಾಲಿನ್ಯ, ದಟ್ಟ ಹೊಗೆ

10:37 AM Dec 11, 2019 | sudhir |

ಸಿಡ್ನಿ: ದಿಲ್ಲಿ ಬಳಿಕ ಇದೀಗ ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ದಟ್ಟ ಹೊಗೆ ಆವರಿಸಿದ್ದು, ವಾಯುಮಾಲಿನ್ಯ ಪ್ರಮಾಣ ಅಪಾಯದ ಮಟ್ಟಕ್ಕಿಂತ 11 ಪಟ್ಟು ಏರಿಕೆ ಕಂಡಿದೆ.

Advertisement

ಕಳೆದ ಒಂದು ತಿಂಗಳಿಂದ ಇಲ್ಲಿ ವಾಯುಮಾಲಿನ್ಯ ಮಟ್ಟ ಏರುತ್ತಿದ್ದು, ಸದ್ಯದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದು ನ್ಯೂ ಸೌತ್‌ವೇಲ್‌ ಸರಕಾರದ ನಿರ್ದೇಶಕ ರಿಚರ್ಡ್‌ ಬ್ರೂಮ್‌ ಹೇಳಿದ್ದಾರೆ.

ವಾಯುಮಾಲಿನ್ಯ ತೀವ್ರಗೊಂಡ ಪರಿಣಾಮ ಸ್ಥಳೀಯ ಜನರಿಗೆ ಕೆಂಗಣ್ಣು, ತುರಿಕೆ ಸಮಸ್ಯೆ, ಗಂಟಲ ಸಮಸ್ಯೆ, ಕಫ‌, ಕೆಮ್ಮು ಇತ್ಯಾದಿಗಳು ಕಾಣಿಸಿಕೊಂಡಿವೆ. ಬಾಲ-ವೃದ್ಧರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚು ಕಾಡಿದೆ.
ಸಿಡ್ನಿಯ ಪ್ರಮುಖ ಸ್ಥಳಗಳು ದಟ್ಟ ಹೊಗೆಯಿಂದ ಆವರಿಸಿದೆ. ಶಾಲೆಗಳಿಂದ ಮಕ್ಕಳನ್ನು ಮಂಗಳವಾರ ವಾಪಸ್‌ ಕಳಿಸಲಾಗಿದೆ. ಇದೇ ವೇಳೆ ನ್ಯೂಸೌತ್‌ವೇಲ್‌ನಲ್ಲಿ ಉಂಟಾದ ಕಾಡ್ಗಿಚ್ಚು ನಂದಿಸಲು 2700 ಅಗ್ನಿಶಾಮಕ ವಾಹನಗಳು ಕಾರ್ಯನಿರತವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next