ಸಿಡ್ನಿ: ಬಿಗ್‌ಬಾಶ್ ಲೀಗ್‌ನಲ್ಲಿ ಅಚ್ಚರಿಯ ಘಟನೆಯೊಂದು ಸಂಭವಿಸಿದೆ.ಬುಧವಾರದ ಅಡಿಲೇಡ್ ಸ್ಟ್ರೈಕರ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ಪರ ಸಹಾಯಕ ಕೋಚ್ ಕೂಡ ಕಣಕ್ಕಿಳಿಯುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು!
ಪಂದ್ಯದ ಆರಂಭಕ್ಕೂ ಮುನ್ನ ಸಿಡ್ನಿ ತಂಡದ ಆರಂಭಿಕ ಮತ್ತು ಕೀಪರ್ ಜೋಶ್ ಫಿಲಿಪ್‌ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ಹೊರಗುಳಿದರು. ಆದರೆ ಬದಲಿ ವಿಕೆಟ್ ಕೀಪರ್ ಯಾರೂ ಇರಲಿಲ್ಲ. ಹೀಗಾಗಿ ತಂಡದ ಸಹಾಯಕ ಕೋಚ್ ಜೇ ಲೆಂಟನ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಯಿತು!
31 ವರ್ಷದ ಲೆಂಟನ್ ಕಳೆದ ವರ್ಷದ ಬಿಗ್‌ಬಾಶ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ಪರ 5 ಪಂದ್ಯ ಆಡಿದ್ದರು. ಆದರೆ ಕಳಪೆ ಪ್ರದರ್ಶನದಿಂದಾಗಿ ಈ ಬಾರಿ ಯಾವುದೇ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಸಿಡ್ನಿ ಸಿಕ್ಸರ್ ತಂಡದ ಸಹಾಯಕ ಕೋಚ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ
ಇದೀಗ ಕೋಚ್ ಆದ ಅನಂತರವೂ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿದ್ದೊಂದು ಅಚ್ಚರಿ. ಈ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ 4 ವಿಕೆಟ್‌ಗಳ ಜಯ ಸಾಧಿಸಿತು. ಚೇಸಿಂಗ್ ವೇಳೆ ಲೆಂಟನ್ ಬ್ಯಾಟಿಂಗಿಗೆ ಬಂದರೂ ಅವರಿಗೆ ಚೆಂಡನ್ನು ಎದುರಿಸುವ ಅವಕಾಶ ಸಿಗಲಿಲ್ಲ.