Advertisement

ಭಾರತ-ಆಸ್ಟ್ರೇಲಿಯಾಕ್ಕೆ ಎರಡು ಟೆಸ್ಟ್‌ ಪಂದ್ಯಗಳ ಆಫ‌ರ್‌ ನೀಡಿದ ಸಿಡ್ನಿ!

11:56 PM Dec 23, 2020 | sudhir |

ಸಿಡ್ನಿ: ಮತ್ತೆ ಕೋವಿಡ್ ಕೇಸ್‌ ಕಾಣಿಸಿಕೊಂಡಿರುವುದರಿಂದ ಸಿಡ್ನಿಯಲ್ಲಿ ನಡೆಯುವ ಭಾರತ-ಆಸ್ಟ್ರೇಲಿಯ ನಡುವಿನ ನ್ಯೂ ಇಯರ್‌ ಟೆಸ್ಟ್‌ ಪಂದ್ಯಕ್ಕೆ ಸಣ್ಣದೊಂದು ಆತಂಕ ಎದುರಾಗಿದೆ. ಈ ನಡುವೆಯೇ ಕೊನೆಯ ಎರಡು ಟೆಸ್ಟ್‌ ಪಂದ್ಯಗಳ ಆತಿಥ್ಯ ವಹಿಸಲು ತಾನು ರೆಡಿ ಎಂದು ಸಿಡ್ನಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಕೊರೊನಾದಿಂದಾಗಿ ನ್ಯೂ ಸೌತ್‌ ವೇಲ್ಸ್‌ ಮತ್ತು ಕ್ವೀನ್ಸ್‌ಲ್ಯಾಂಡ್‌ ನಡುವಿನ ಗಡಿಯನ್ನು ಮುಚ್ಚಲಾಗಿದೆ. ಈ ಪ್ರಾಂತ್ಯದ ರಾಜಧಾನಿಗಳಾದ ಸಿಡ್ನಿ ಮತ್ತು ಬ್ರಿಸ್ಬೇನ್‌ನಲ್ಲಿ ಕೊನೆಯ ಎರಡು ಟೆಸ್ಟ್‌ ಪಂದ್ಯ ನಡೆಯಬೇಕಿದೆ. ಅಕಸ್ಮಾತ್‌ ಕ್ವೀನ್ಸ್‌ಲ್ಯಾಂಡ್‌ನ‌ ಗಡಿ ತೆರೆಯದೇ ಹೋದರೆ ಅಂತಿಮ ಟೆಸ್ಟ್‌ ಪಂದ್ಯದ ಆತಿಥ್ಯವನ್ನೂ ವಹಿಸಲು ಸಿಡ್ನಿ ಸಿದ್ಧವಿದೆ ಎಂದು “ಸಿಡ್ನಿ ಕ್ರಿಕೆಟ್‌ ಆ್ಯಂಡ್‌ ನ್ಪೋರ್ಟ್ಸ್ ಗ್ರೌಂಡ್‌ ಟ್ರಸ್ಟ್‌’ನ ಚೇರ್ಮನ್‌ ಟೋನಿ ಶೆಫ‌ರ್ಡ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಫಿಫಾ ಮಾಜಿ ಅಧ್ಯಕ್ಷ ಬ್ಲೇಟರ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಈ ನಡುವೆ ಕ್ವೀನ್ಸ್‌ಲ್ಯಾಂಡ್‌ ಸರಕಾರ ಮತ್ತು ಕ್ರಿಕೆಟ್‌ ಆಸ್ಟ್ರೇಲಿಯ ನಡುವೆ ಮಾತುಕತೆ ಕೂಡ ನಡೆದಿದೆ. ಜ. 8ರ ತನಕ ಯಾವುದೇ ಕಾರಣಕ್ಕೂ ತಾನು ಗಡಿ ತೆರೆಯುವುದಿಲ್ಲ ಎಂದು ಕ್ವೀನ್ಸ್‌ಲ್ಯಾಂಡ್‌ ಸ್ಪಷ್ಟಪಡಿಸಿದ್ದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next