Advertisement

Sydney: ವಾರ್ನರ್‌ಗೆ ವಿದಾಯದ ಟೆಸ್ಟ್‌?

11:42 PM Dec 03, 2023 | Team Udayavani |

ಸಿಡ್ನಿ: ಪ್ರವಾಸಿ ಪಾಕಿಸ್ಥಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೆ 37 ವರ್ಷದ ಡೇವಿಡ್‌ ವಾರ್ನರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ಪಂದ್ಯ ಡಿ. 14ರಿಂದ 19ರ ತನಕ ಪರ್ತ್‌ನಲ್ಲಿ ನಡೆಯಲಿದೆ.

Advertisement

ಸರಣಿಯಲ್ಲಿ ಒಟ್ಟು 3 ಟೆಸ್ಟ್‌ ಪಂದ್ಯಗಳು ನಡೆಯ ಲಿದ್ದು, ಮೊದಲ ಪಂದ್ಯಕ್ಕಷ್ಟೇ ತಂಡವನ್ನು ಹೆಸರಿಸಲಾಗಿದೆ. ದ್ವಿತೀಯ ಪಂದ್ಯ ಮೆಲ್ಬರ್ನ್ನಲ್ಲಿ ನಡೆಯಲಿದ್ದು, ಇದು “ಬಾಕ್ಸಿಂಗ್‌ ಡೇ ಟೆಸ್ಟ್‌’ ಆಗಿರಲಿದೆ (ಡಿ. 26-30). ಮುಂದಿನದು “ನ್ಯೂ ಇಯರ್‌ ಟೆಸ್ಟ್‌’. ಇದು ಸಿಡ್ನಿಯಲ್ಲಿ ಜ. 3ರಿಂದ 7ರ ತನಕ ನಡೆಯಲಿದೆ. ಬಹುಶಃ ಡೇವಿಡ್‌ ವಾರ್ನರ್‌ ಪಾಲಿಗೆ ಸಿಡ್ನಿ ಟೆಸ್ಟ್‌ ವಿದಾಯ ಪಂದ್ಯವಾಗುವ ಎಲ್ಲ ಸಾಧ್ಯತೆ ಇದೆ. ಸಿಡ್ನಿಯಲ್ಲೇ ಕೊನೆಯ ಟೆಸ್ಟ್‌ ಆಡಬೇಕೆಂಬುದು ವಾರ್ನರ್‌ ಅವರ ಬಯಕೆಯೂ ಹೌದು.

ಡೇವಿಡ್‌ ವಾರ್ನರ್‌ ಕಳೆದ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಯುವಕರನ್ನೂ ನಾಚಿಸುವ ರೀತಿಯಲ್ಲಿ ಹೊಡಿಬಡಿ ಆಟಕ್ಕಿಳಿದು ಸೆಂಚುರಿಯನ್ನೂ ಬಾರಿಸಿದ್ದರು. ಆದರೆ ಟೆಸ್ಟ್‌ನಲ್ಲಿ ರನ್‌ ಬರಗಾಲ ಅನುಭವಿಸುತ್ತಿದ್ದಾರೆ. 2019ರಿಂದೀಚೆಗಿನ ಅವರ ಟೆಸ್ಟ್‌ ಸರಾಸರಿ 28ರ ಆಸುಪಾಸಿನಲ್ಲಿದೆ. ಅಂದು ಪಾಕಿಸ್ಥಾನ ವಿರುದ್ಧದ ಅಡಿಲೇಡ್‌ ಟೆಸ್ಟ್‌ನಲ್ಲಿ ಅಮೋಘ ತ್ರಿಶತಕ ಬಾರಿಸಿದ್ದರು.

ಟೆಸ್ಟ್‌ ತಂಡ: ಪ್ಯಾಟ್‌ ಕಮಿನ್ಸ್‌ (ನಾಯಕ), ಸ್ಕಾಟ್‌ ಬೋಲ್ಯಾಂಡ್‌, ಅಲೆಕ್ಸ್‌ ಕ್ಯಾರಿ, ಕ್ಯಾಮರಾನ್‌ ಗ್ರೀನ್‌, ಜೋಶ್‌ ಹೇಝಲ್‌ವುಡ್‌, ಟ್ರ್ಯಾವಿಸ್‌ ಹೆಡ್‌, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಶೇನ್‌, ನಥನ್‌ ಲಿಯಾನ್‌, ಮಿಚೆಲ್‌ ಮಾರ್ಷ್‌, ಲ್ಯಾನ್ಸ್‌ ಮಾರಿಸ್‌, ಸ್ಟೀವನ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಡೇವಿಡ್‌ ವಾರ್ನರ್‌.

Advertisement

Udayavani is now on Telegram. Click here to join our channel and stay updated with the latest news.

Next