ಬರ್ನ್: ಇನ್ನು ಬದುಕು ಬೇಡ. ಜೀವನ ಮುಂದುವರಿಸುವುದು ಸಾಧ್ಯವೇ ಇಲ್ಲ ಎನ್ನುವವರಿಗೆ ದಯಾಮರಣ ಆಯ್ಕೆ ಮಾಡಿಕೊಳ್ಳುವುದಕ್ಕೆ ಅನೇಕ ರಾಷ್ಟ್ರಗಳು ಅವಕಾಶ ಕಲ್ಪಿಸಿಕೊಟ್ಟಿವೆ.
ವಿಶೇಷವೆಂದರೆ ಸ್ವಿಜರ್ಲೆಂಡ್‌ನಲ್ಲಿ ಇದೀಗ ದಯಾಮರಣಕ್ಕೆಂದೇ ಮಿಷನ್ ತಯಾರಿಸಲಾಗಿದ್ದು, ಅದಕ್ಕೆ ಸರ್ಕಾರ ಅನುಮತಿಯನ್ನೂ ನೀಡಿದೆ.
ಎಕ್ಸಿಟ್ ಇಂಟರ್‌ನ್ಯಾಷನಲ್ ಹೆಸರಿನ ಎನ್‌ಜಿಒ ಮುಖ್ಯಸ್ಥ ಡಾ.ಫಿಲಿಪ್ ನಿಟೆÒ$R ಅದರ ರೂವಾರಿ. ಅದಕ್ಕೆ “ಸಾರ್ಕೊ’ ಎನ್ನುವ ಹೆಸರನ್ನೂ ಇಡಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಒಂದೇ ಕ್ಷಣದಲ್ಲಿ ಮನುಷ್ಯ ದೇಹದ ಆಮ್ಲಜನಕ ಪ್ರಮಾಣವನ್ನು ಕುಗ್ಗಿಸಿ, ಆತ ಸಾವಿಗೀಡಾಗುವಂತೆ ಮಾಡುತ್ತದೆಯಂತೆ. ದಯಾಮರಣಕ್ಕಾಗಿಯೇ ಮಾಡಲಾಗಿರುವ ಈ ಮಿಷನ್ ಅನ್ನು ವಿಶೇಷವಾಗಿ ಶವ ಪೆಟ್ಟಿಗೆ ರೂಪದಲ್ಲಿಯೇ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ:ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್ ವಿರುದ್ಧ ಎಫ್ಐಆರ್
ದಯಾಮರಣಕ್ಕೆ ಅನುಮತಿ ಪಡೆದಿರುವವರ ಮನೆಗೇ ಈ ಮಿಷನ್ ಅನ್ನು ತೆಗೆದುಕೊಂಡು ಹೋಗಲಾಗುತ್ತದೆಯಂತೆ.
ಸ್ವಿಜರ್‌ಲೆಂಡ್‌ನಲ್ಲಿ ದಯಾಮರಣಕ್ಕೆಂದೇ ಅನೇಕ ಸಂಸ್ಥೆಗಳಿವೆ. ಕಳೆದ ವರ್ಷವೊಂದರಲ್ಲೇ ಈ ದೇಶದಲ್ಲಿ 1,300 ಮಂದಿ ದಯಾಮರಣಕ್ಕೀಡಾಗಿದ್ದಾರೆ. ಈವರೆಗೆ ಸಂಸ್ಥೆಗಳು ದಯಾಮರಣಕ್ಕೆಂದೇ ಮೀಸಲಾಗಿ ಇರುವ ಔಷಧ ಬಳಕೆ ಮಾಡುತ್ತಿದ್ದರು. ಇದೀಗ ಅದಕ್ಕೆಂದೇ ಮಿಷನ್ ಸಿದ್ಧವಾಗಿದೆ.