Advertisement

ಸ್ವಿಸ್ : ಗಡಿ ತೆರೆಯಲು ಘೋಷಣೆ

02:36 PM May 07, 2020 | sudhir |

ಮಣಿಪಾಲ: ದೇಶದ ಗಡಿಗಳನ್ನು ಮತ್ತೆ ಕಾರ್ಯಾಚರಿಸಲು ಸ್ವಿಸ್‌ ಸರಕಾರ ನಿರ್ಧರಿಸಿದ್ದು, ಸೂಕ್ತ ಮತ್ತು ಅಗತ್ಯ ಕ್ರಮಗಳನ್ನು ಒಳಗೊಂಡ “ಸುರಾಕ್ಷ ಮಾರ್ಗಗಳ ನಕ್ಷೆ’ಯನ್ನು ರೂಪಿಸಿದೆ.

Advertisement

ದೇಶದ ಜನರು ತಮ್ಮ ಕುಟುಂಬ ವರ್ಗದರಿಂದ, ತಮ್ಮ ಬಂಧು ಬಳಗದವರಿಂದ ದೂರ ಇದ್ದು, ಸಂಪರ್ಕಕ್ಕೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿಶೇಷವಾಗಿ ಫ್ರಾನ್ಸ್, ಇಟಲಿ ಮತ್ತು ಜರ್ಮನಿ ದೇಶಗಳಲ್ಲಿ ಅತೀ ಹೆಚ್ಚು ಕುಟುಂಬ ವರ್ಗದವರನ್ನು ಹೊಂದಿರುವ ಸ್ವಿಸ್ ದೇಶದ ಪ್ರಜೆಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಜನಗಳ ಪೈಕಿ ಮಕ್ಕಳಿಂದ ದೂರವಿರುವ ಹಿರಿಯ ಪೋಷಕರು ಇದ್ದಾರೆ.
ಈ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಗಡಿಭಾಗಗಳನ್ನು ತೆರೆವುಗೊಳಿಸುವಂತೆ ಒತ್ತಡ ಹೆಚ್ಚುತ್ತಿದ್ದು, ಜನರ ಮನವಿಗೆ ಮಣಿದ ಸರಕಾರ ವಿಮಾನಯಾನವನ್ನು ಪ್ರಾರಂಭಿಸಲು ಸೂಕ್ತ ಮಾರ್ಗಸೂಚಿಯನ್ನು ರೂಪಿಸಲು ಮುಂದಾಗಿದೆ.

ಹಾಗಾಗಿ ಫ್ರಾನ್ಸ್, ಇಟಲಿ ಮತ್ತು ಜರ್ಮನಿ ದೇಶಗಳೊಂದಿಗೆ ಸಂಪರ್ಕ ಕಲ್ಪಿಸುವ ಗಡಿಭಾಗವನ್ನು ಸದ್ಯದಲೇ ತೆರವುಗೊಳಿಸುವುದಾಗಿ ಸ್ವಿಜ್‌ ಸರಕಾರ ಘೋಷಿಸಿದೆ.

ಆದರೆ ಈ ಕುರಿತಾದ ಟೈಮ್‌ಲೈನ್‌ ಯಾವಾಗ ಬಿಡುಗಡೆಯಾಗುತ್ತದೆ ಅಥವಾ ಮೊದಲು ಯಾವ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎಂಬುದರ ಕುರಿತು ಸರಕಾರ ಯಾವುದೇ ಮಾಹಿತಿಯನ್ನು ನೀಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next