Advertisement

ಸ್ವಿಸ್‌ ಬ್ಯಾಂಕ್‌ಗಳಲ್ಲಿನ ಭಾರತೀಯ ಹಣ ಗಣನೀಯ ಹೆಚ್ಚಳ: ಎಸ್‌ಎನ್‌ಬಿ ವರದಿ

09:07 PM Jun 17, 2021 | Team Udayavani |

ದೆಹಲಿ/ಜ್ಯೂರಿಚ್‌: ಸ್ವಿಜರ್ಲೆಂಡ್‌ನ‌ ಬ್ಯಾಂಕ್‌ಗಳಲ್ಲಿರುವ ಭಾರತೀಯ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಖಾತೆಗಳಲ್ಲಿರುವ ಹಣದ ಮೊತ್ತ ಕಳೆದ ವರ್ಷ 20,707 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ (ಎಸ್‌ಎನ್‌ಬಿ) ನೀಡಿರುವ ವಾರ್ಷಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ಷೇರು ಮಾರುಕಟ್ಟೆಗಳಲ್ಲಿ ಈ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಷೇರು ವ್ಯವಹಾರಗಳಲ್ಲಿ ಬಂದಿರುವ ಅಪಾರ ಲಾಭವನ್ನು ಆ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸ್ವಿಸ್‌ ಬ್ಯಾಂಕ್‌ನಲ್ಲಿಟ್ಟಿದ್ದಾರೆ. ಆದರೆ, ಇದೇ ಅವಧಿಯಲ್ಲಿ ಸ್ವಿಸ್‌ ಬ್ಯಾಂಕುಗಳ ಗ್ರಾಹಕರ ಖಾತೆಗಳಲ್ಲಿನ ಹಣ ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

“2019ರಲ್ಲಿ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಹಣದ ಮೊತ್ತ 6,625 ಕೋಟಿ ರೂ. ಇತ್ತು. ಆದರೆ, ಇದು ಕ್ರಮೇಣ ಏರಿಕೆಯಾಗಿ, ಈಗ 20,707 ಕೋಟಿ ರೂ.ಗಳಿಗೆ ಮುಟ್ಟಿದೆ. ಈ ಮಟ್ಟದ ಏರಿಕೆಯಾಗಿರುವುದು ಕಳೆದ 13 ವರ್ಷಗಳಲ್ಲಿ ಇದೇ ಮೊದಲು. 2006ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿದ್ದ ಭಾರತೀಯರ ಹಣ ಗಣನೀಯವಾಗಿ ಏರಿತ್ತು. ಆದರೆ, ಆನಂತರದ ವರ್ಷಗಳಲ್ಲಿ ಈ ಠೇವಣಿ ಇಳಿಕೆಯ ಹಾದಿಯಲ್ಲಿ ಸಾಗಿತ್ತು. 2011, 2013 ಹಾಗೂ 2017ರಲ್ಲಿ ಖಾತೆಗಳಲ್ಲಿನ ಹಣ ಗಣನೀಯವಾಗಿ ಇಳಿಕೆಯಾಗಿತ್ತು. ಕಳೆದ ವರ್ಷ ಏರಿಕೆಯಾಗಿರುವ 20,707 ಕೋಟಿ ರೂ. ಹಣದಲ್ಲಿ 4,000 ಕೋಟಿ ರೂ.ಗಳಷ್ಟು ಹಣ ಕಸ್ಟಮರ್‌ ಡೆಪಾಸಿಟ್‌ ರೂಪದಲ್ಲಿದೆ. 16.5 ಕೋಟಿ ರೂ.ಗಳು ಭಾರತದ ಸಂಸ್ಥೆಗಳ ರೂಪದಲ್ಲಿವೆ” ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next