Advertisement

ಸ್ವಿಸ್‌ ಬ್ಯಾಡ್ಮಿಂಟನ್‌: ಚಿರಾಗ್‌ -ಸಾತ್ವಿಕ್‌ ಸೆಮಿಫೈನಲಿಗೆ

09:24 PM Mar 25, 2023 | Team Udayavani |

ಬಾಸೆಲ್‌ (ಸ್ವಿಜರ್ಲೆಂಡ್‌): ಸ್ವಿಸ್‌ ಓಪನ್‌ ಸೂಪರ್‌ ಸೀರೀಸ್‌-300 ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಏಕೈಕ ಭರವಸೆ ಆಗಿರುವ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಜೋಡಿ ಡೆನ್ಮಾರ್ಕ್‌ನ ಜೆಪ್‌ ಬೇ-ಲಾಸ್ಸೆ ಮಲ್ಹೆದ್‌ ವಿರುದ್ಧ 54 ನಿಮಿಷಗಳ ಹೋರಾಟ ನಡೆಸಿ 15-21, 21-11, 21-14 ಅಂತರದ ಗೆಲುವು ಸಾಧಿಸಿತು. ಪ್ರಶಸ್ತಿ ಸಮರದಲ್ಲಿ ಚಿರಾಗ್‌-ಸಾತ್ವಿಕ್‌ ಮಲೇಷ್ಯಾದ ಓಂಗ್‌ ವ್ಯೂ ಸಿನ್‌-ಟೆ ಈ ಯೀ ವಿರುದ್ಧ ಸೆಣೆಸಲಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next