ಮುಂಬೈ: ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ (Swiggy) ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್ ಗಳನ್ನು ವಿತರಿಸಿದೆ. ರಾತ್ರಿ 10.25 ರ ಹೊತ್ತಿಗೆ ಅಪ್ಲಿಕೇಶನ್ ದೇಶಾದ್ಯಂತ 61,000 ಪಿಜ್ಜಾಗಳನ್ನು ಡೆಲಿವರಿ ಮಾಡಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಟ್ವಿಟರ್ ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈದರಾಬಾದಿ ಬಿರಿಯಾನಿಗೆ ಶೇಕಡಾ 75.4 ರಷ್ಟು ಆರ್ಡರ್‌ಗಳು ಬಂದಿವೆ, ನಂತರ ಲಕ್ನೋವಿ ಬಿರಿಯಾನಿಗೆ 14.2 ಮತ್ತು ಕೋಲ್ಕತ್ತಾ ಶೇಕಡಾ 10.4 ಆರ್ಡರ್ ಗಳು ಬಂದಿದೆ.
“3.50 ಲಕ್ಷ ಆರ್ಡರ್‌ಗಳೊಂದಿಗೆ, ಅತೀ ಹೆಚ್ಚು ವಿತರಣೆ ಮಾಡಲಾದ ಐಟಂ ಬಿರಿಯಾನಿಯಾಗಿದೆ” ಎಂದು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಆ್ಯಪ್ ಗೆ ಶನಿವಾರ ಸಂಜೆ 7.20ಕ್ಕೆ 1.65 ಲಕ್ಷ ಬಿರಿಯಾನಿ ಆರ್ಡರ್ ಗಳನ್ನು ತಲುಪಿಸಿತ್ತು.
ಇದನ್ನೂ ಓದಿ:ಸಾನ್ಯಾ ಅಯ್ಯರ್, ಗಡಿನಾಡ ಕನ್ನಡಿಗ, ಹುಲಿವೇಷ…ಮಾತು ಮನರಂಜನೆಯಿಂದಲೇ ಬಿಗ್ ಬಾಸ್ ಟ್ರೋಪಿ ಗೆದ್ದ ರೂಪೇಶ್
ಹೈದರಾಬಾದ್ ನ ಟಾಪ್ ಬಿರಿಯಾನಿ ಮಾರಾಟದ ರೆಸ್ಟೋರೆಂಟ್ ಗಳಲ್ಲಿ ಒಂದಾದ ಬವಾರ್ಚಿ, 2021 ರ ಹೊಸ ವರ್ಷದ ಮುನ್ನಾದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿತ್ತು. ಡಿಸೆಂಬರ್ 31, 2022 ಕ್ಕೆ ಬೇಡಿಕೆಯನ್ನು ಪೂರೈಸಲು 15 ಟನ್ ಬಿರಿಯಾನಿ ಸಿದ್ಧಪಡಿಸಿದೆ.
ಡೊಮಿನೋಸ್ ಇಂಡಿಯಾವು 61,287 ಪಿಜ್ಜಾಗಳನ್ನು ವಿತರಿಸಿದೆ. 7 ಗಂಟೆಯ ವೇಳೆಗೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ನಿಂದ 1.76 ಲಕ್ಷ ಚಿಪ್ಸ್ ಪ್ಯಾಕೇಟ್ ಗಳನ್ನು ಡೆಲಿವರಿ ಮಾಡಲಾಗಿದೆ. 9.18ರವರೆಗೆ ಭಾರತದಲ್ಲಿ 12,344 ಮಂದಿ ಕಿಚಡಿ ಆರ್ಡರ್ ಮಾಡಿದ್ದಾರೆ.