ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು: 1 ಕಪ್
ಬೆಲ್ಲ: 2/1 ಕಪ್
ತೆಂಗಿನಕಾಯಿ: 2 ಚಮಚ
ಗಸಗಸೆ: 1 ಚಮಚ
ಹುರಿದ ನೆಲಗಡಲೆ: 2 ಚಮಚ
ಪುಟಾಣಿ: 1 ಚಮಚ
ಏಲಕ್ಕಿ: ಎರಡು ಎಸಳು
ಉಪ್ಪು- ರುಚಿಗೆ ತಕ್ಕಷ್ಟು
Advertisement
ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಅದಕ್ಕೆ ಬೇಕಾದಷ್ಟು ನೀರನ್ನು ಹಾಕಿ ಹದವಾಗಿ ಕಲಸಿಕೊಳ್ಳಬೇಕು. ಅನಂತರ ಅದನ್ನು ಚಪಾತಿಯಾಕಾರದಲ್ಲಿ ಲಟ್ಟಿಸಿ ಅದಕ್ಕೆ ಎಣ್ಣೆಯನ್ನು ಸೇರಿಸದೆ ತವಾದಲ್ಲಿ ಹಾಕಿ ಕಾಯಿಸಿಕೊಳ್ಳಿ. ಅನಂತರ ಅದನ್ನು ಚೂರು ಚೂರನ್ನಾಗಿ ಮಾಡಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ಅದಕ್ಕೆ ಪುಡಿ ಮಾಡಿದ ಬೆಲ್ಲ, ಏಲಕ್ಕಿಯನ್ನು ರುಬ್ಬಿಕೊಂಡು ಬಳಿಕ ಒಂದು ಪಾತ್ರೆಗೆ ಹಾಕಿ ಅದಕ್ಕೆ ಹುರಿದ ಗಸಗಸೆ ಮತ್ತು ತೆಂಗಿನಕಾಯಿ, ಪುಟಾಣಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಹಾಲು ಮತ್ತು ತುಪ್ಪದೊಂದಿಗೆ ಸವಿಯಲು ಸಿದ್ಧ.
ಬೇಕಾಗುವ ಸಾಮಗ್ರಿಗಳು:
ಅವಲಕ್ಕಿ- 1 ಕಪ್
ಹೆಸರು ಬೇಳೆ: 1 ಕಪ್
ಬೆಲ್ಲ : 1 ಕಪ್
ತೆಂಗಿನಕಾಯಿ: 2/1 ಕಪ್
ಹಾಲು: 1 ಕಪ್
ತುಪ್ಪ: 1ಚಮಚ
ಗೋಡಂಬಿ -ಸ್ವಲ್ಪ
ಒಣದ್ರಾಕ್ಷಿ -ಸ್ವಲ್ಪ ಮಾಡುವ ವಿಧಾನ:
ಮೊದಲಿಗೆ ಹೆಸರು ಬೇಳೆಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.ಅದಕ್ಕೆ ನೀರು, ಅರಶಿನ ಹಾಕಿ ಕುಕ್ಕರ್‌ನಲ್ಲಿ ಇಟ್ಟು ಎರಡು ವಿಶಲ್ ಬರುವ ವರೆಗೆ ಬೆಯಿಸಿ. ಇನ್ನೊಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಇಟ್ಟುಕೊಂಡಿರಿ. ಅನಂತರ ಕುಕ್ಕರ್‌ನಲ್ಲಿ ಬೇಯಲು ಇಟ್ಟ ಹೆಸರು ಬೇಳೆಗೆ ಅವಲಕ್ಕಿಯನ್ನು ಸೇರಿಸಿ, ಅದಕ್ಕೆ ಬೆಲ್ಲದ ನೀರು ಹಾಗೂ ತೆಂಗಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಈಗ ಹಾಲನ್ನು ಸೇರಿಸಿಕೊಂಡು ಇನ್ನಷ್ಟು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಏಲಕ್ಕಿ ಹುಡಿ ಹಾಕಿ ಕೊಳ್ಳಿ.ಅನಂತರ ಚೆನ್ನಾಗಿ ಕದಡಿ. ಅನಂತರ ಅದಕ್ಕೆ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಹಾಕಿ ಸವಿಯಿರಿ.
Related Articles
Advertisement