Advertisement
ಸಿಹಿ ಬೇಲ್ಬೇಕಾಗುವ ಸಾಮಗ್ರಿ: 2 ಚಮಚ ಬೆಣ್ಣೆ , 2 ಚಮಚ ನೆಲಗಡಲೆ ಬೀಜ, 1 ಈರುಳ್ಳಿ , 1 ಟೊಮೆಟೊ, 2 ಚಮಚ ಕ್ಯಾರೆಟ್ ತುರಿ, 2 ಚಮಚ ಹುರಿಯಕ್ಕಿ, 2 ಚಮಚ ಖಾರ ಸೇವು, 1 ಚಮಚ ನಿಂಬೆರಸ, ಸ್ವಲ್ಪ ಕೊತ್ತಂಬರಿಸೊಪ್ಪು , 1/4 ಕಪ್ ಸಿಹಿ ಜೋಳ, ಚಿಟಿಕೆ ಉಪ್ಪು , 1 ಚಮಚ ಬೆಲ್ಲ.
ಬೇಕಾಗುವ ಸಾಮಗ್ರಿ: 1 ಕಪ್ ಸಿಹಿಜೋಳ, ಒಂದೂವರೆ ಕಪ್ ಅಕ್ಕಿಹಿಟ್ಟು , 1/4 ಕಪ್ ಸಬ್ಬಸಿಗೆ ಸೊಪ್ಪು , 1/2 ಕಪ್ ತೆಂಗಿನತುರಿ, 1/2 ಕಪ್ ಈರುಳ್ಳಿ ಚೂರು, 1/4 ಚಮಚ ಅರಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು , ಜಜ್ಜಿದ ಶುಂಠಿ 1/4 ಚಮಚ, 1-2 ಹಸಿಮೆಣಸು, 3-4 ಚಮಚ ಎಣ್ಣೆ.
Related Articles
Advertisement
ಸಿಹಿಜೋಳ-ದ್ರಾಕ್ಷೆ ಸಲಾಡ್ಬೇಕಾಗುವ ಸಾಮಗ್ರಿ: 2 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1 ಎಸಳು ಕರಿಬೇವು, 1/4 ಕಪ್ ಕ್ಯಾರೆಟ್ ತುರಿ, 1 ಕಪ್ ಸಿಹಿಜೋಳ, 1/4 ಕಪ್ ತೆಂಗಿನ ತುರಿ, 1/4 ಕಪ್ ಒಣದ್ರಾಕ್ಷೆ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ: ಸಿಹಿಜೋಳ, ಕ್ಯಾರೆಟ್ ತುರಿ, ತೆಂಗಿನ ತುರಿ, ಒಣದ್ರಾಕ್ಷೆ , ಉಪ್ಪು ಸೇರಿಸಿ ಬೆರೆಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಕೊಡಿ. ಸಿಹಿಜೋಳದ ಪರೋಟ
ಬೇಕಾಗುವ ಸಾಮಗ್ರಿ: 1 ಕಪ್ ಸಿಹಿಜೋಳ, 2 ಹಸಿಮೆಣಸು, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ , 1/2 ಚಮಚ ಖಾರದ ಪುಡಿ, 3 ಚಮಚ ಕೊತ್ತಂಬರಿಸೊಪ್ಪು , ರುಚಿಗೆ ತಕ್ಕಷ್ಟು ಉಪ್ಪು , 1 ಚಮಚ ಸಕ್ಕರೆ, 1/2 ಕಪ್ ಗೋಧಿಹಿಟ್ಟು , 2-3 ಚಮಚ ತುಪ್ಪ. ತಯಾರಿಸುವ ವಿಧಾನ: ಸಿಹಿ ಜೋಳವನ್ನು ಬೇಯಿಸಿ. ನಂತರ ಸಕ್ಕರೆ, ಹಸಿಮೆಣಸು ಸೇರಿಸಿ ರುಬ್ಬಿ. ನಂತರ ಗೋಧಿಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹಧಕ್ಕೆ ಕಲಸಿ. ಕಲಸುವಾಗ ಉಪ್ಪು ಹಾಕಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಕೊತ್ತಂಬರಿಸೊಪ್ಪು ಸೇರಿಸಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಚಪಾತಿ ಹಿಟ್ಟಿನಿಂದ ಉಂಡೆ ಮಾಡಿ ಮೇಲೆ ಕೊತ್ತಂಬರಿಸೊಪ್ಪಿನ ಮಿಶ್ರಣ ಇಟ್ಟು ಮುಚ್ಚಿ ಚಪಾತಿ ಲಟ್ಟಿಸಿ ತವಾದಲ್ಲಿ ಹಾಕಿ 2 ಬದಿ ಬೇಯಿಸಿ ತೆಗೆಯಿರಿ. ಸಿಹಿಜೋಳ ತುಕ್ಕುಡಿ
ಬೇಕಾಗುವ ಸಾಮಗ್ರಿ: 1/2 ಕಪ್ ಸಿಹಿಜೋಳ, 1 ಕಪ್ ಮೈದಾಹಿಟ್ಟು , 1 ಚಮಚ ಕೆಂಪುಮೆಣಸು ಪುಡಿ, 1/2 ಚಮಚ ಜೀರಿಗೆ ಪುಡಿ, 1 ಚಮಚ ಸಕ್ಕರೆ, ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ. ತಯಾರಿಸುವ ವಿಧಾನ: ಸಿಹಿ ಜೋಳವನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಮೈದಾಹಿಟ್ಟಿಗೆ ರುಬ್ಬಿದ ಮಿಶ್ರಣ, ಕೆಂಪುಮೆಣಸು ಪುಡಿ, ಜೀರಿಗೆ ಪುಡಿ, ಸಕ್ಕರೆ, ಉಪ್ಪು, ಬಿಸಿ ಮಾಡಿದ ಎಣ್ಣೆ ಹಾಕಿ ಚೆನ್ನಾಗಿ ಕಲಸಿ ಹದ ಮಾಡಿ. ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿ ಚಪಾತಿ ಮಣೆಯಲ್ಲಿ ತೆಳ್ಳಗೆ ಲಟ್ಟಿಸಿ ಅಂಟದಂತೆ ಮೈದಾ ಹಿಟ್ಟಿಗೆ ಮುಟ್ಟಿಸಿ. ನಂತರ ತುಕ್ಕುಡಿ ಮಾಡುವ ಚಕ್ರದ ಸಹಾಯದಿಂದ ಡೈಮಂಡ್ ಆಕಾರದಲ್ಲಿ ತುಂಡು ಮಾಡಿ ಬಿಸಿ ಎಣ್ಣೆಗೆ ಹಾಕಿ ಕರಿದು ತೆಗೆಯಿರಿ. ಈಗ ರುಚಿಯಾದ ಜೋಳದ ತುಕ್ಕುಡಿ ತಿನ್ನಲು ಸಿದ್ಧ. ಸರಸ್ವತಿ ಎಸ್. ಭಟ್