Advertisement

ಸ್ವೀಪ್‌ ಅಭಿಯಾನ-ಜಾಗೃತಿ ಜಾಥಾಗೆ ಚಾಲನೆ

05:17 PM Nov 23, 2022 | Team Udayavani |

ಕಾರವಾರ: ಅಮದಳ್ಳಿಯಲ್ಲಿ ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ-2023 ಸ್ವೀಪ್‌ ಅಭಿಯಾನದಡಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಪ್ರಿಯಾಂಗಾ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

Advertisement

ಮತದಾನ ಪವಿತ್ರವಾದುದು. ಮತದಾನದ ಹಕ್ಕು ಪ್ರಜೆಗಳ ಅತ್ಯಂತ ಜವಾಬ್ದಾರಿ ಕಾರ್ಯವಾಗಿದೆ. ಸಂವಿಧಾನ ಸಾರ್ವಜನಿಕರಿಕೆ ನೀಡಿದ ಪರಮೋತ್ಛ ಅಧಿಕಾರ ಎಂದರೆ ಮತದಾನ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಕ್ಷಿಪ್ತ 2023ರ ಕರಡು ಮತದಾರರ ಪಟ್ಟಿ ಪ್ರಕಟಣೆ ಕೆಲಸ ಆರಂಭವಾಗಿದೆ. ಯುವ ಮತದಾರರ ಹೆಸರು ಸೇರ್ಪಡೆಗೆ ಡಿ. 4ರವರೆಗೆ ಅವಕಾಶವಿದೆ. ಪರಿಷ್ಕರಣೆಗೆ ಸಹ ಅವಕಾಶವಿದೆ. ಅರ್ಹ ಹೊಸ ಮತದಾರರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಳ್ಳಬಹುದು. ಜೊತೆಗೆ ಭಾವಚಿತ್ರ ಬದಲಾವಣೆ, ವಿಳಾಸ ಬದಲಾವಣೆ ಸೇರಿ ಎಲ್ಲ ರೀತಿಯ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಚುನಾವಣಾ ಆಯೋಗ, ಜಿಲ್ಲಾಡಳಿತ ನೀಡಿರುವ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿಇಒ ಪ್ರಿಯಾಂಗಾ ಕರೆ ನೀಡಿದರು.

ಜಾಗೃತಿ ಜಾಥ ಮಾಡಬೇಕಾದ ಕೆಲಸಗಳನ್ನು ಅವರು ಇದೇ ಸಂದರ್ಭದಲ್ಲಿ ಸೂಚಿಸಿದರು. ಅಮದಳ್ಳಿಯ ಸಾರ್ವಜನಿಕರು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next