Advertisement

ಸ್ವೀಡನ್‌: ನಿರುದ್ಯೋಗವೇ ಬಿಕ್ಕಟ್ಟು

02:07 PM Apr 27, 2020 | sudhir |

ಮಣಿಪಾಲ : ಕೋವಿಡ್‌-19 ಸೃಷ್ಟಿಸಿರುವ ಅವಾಂತರದಿಂದ ಬಲಿಷ್ಠ, ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಹಿಡಿದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಪುಟಿದೇಳಿರುವ ಸಾಮಾನ್ಯ ಸಮಸ್ಯೆ ಎಂದರೆ ನಿರುದ್ಯೋಗ. ಬಹುತೇಕ ದೇಶಗಳಂತೂ ಆರ್ಥಿಕವಾಗಿ ಮಹಾಪತನಕ್ಕೆ ಗುರಿಯಾಗಿದ್ದು, ತಲೆದೋರುತ್ತಿರುವ ಸಂಕಷ್ಟಗಳಿಂದ ಹೊರಬರುವ ಬಗೆ ಯೋಚಿಸುತ್ತಿವೆ. ಇಂತಹ ಸ್ಥಿತಿಗೆ ಸ್ವೀಡನ್‌ ಹೊರತಾಗಿಲ್ಲ. ಈ ಹಿನ್ನಲೆಯಲ್ಲಿ ಕೋವಿಡ್‌-19 ಬಿಕ್ಕಟ್ಟಿನಿಂದಾಗಿ ದೇಶಕ್ಕೆ ಮುಂಬರುವ ಸವಾಲುಗಳ ಕುರಿತು ಮಾಧ್ಯಮ ಸಂದರ್ಶನದಲ್ಲಿ ಸ್ವೀಡನ್‌ನ ಉಪ ಪ್ರಧಾನಿ ಇಸಾಬೆಲ್ಲಾ ಲೆವಿನ್‌ ತಮ್ಮ ನಿಲುವನ್ನು ಹಂಚಿಕೊಂಡಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಸರಕಾರ ಅನುಸರಿಸುತ್ತಿರುವ ಮಾರ್ಗಗಳನ್ನು ವಿವರಿಸಿದ್ದಾರೆ.

Advertisement

ಕೆಲ ವಾರಗಳಲ್ಲಿ ಕೋವಿಡ್‌-19 ಸೋಂಕು ನಿಯಂತ್ರಣಕ್ಕೆ ಬಂದು, ಸೋಂಕು ಪ್ರಸರಣ ಪ್ರಮಾಣ ಕಡಿಮೆಗೊಂಡು ಲಾಕ್‌ಡೌನ್‌ ತೆರವುಗೊಳ್ಳಬಹುದು. ಆದರೆ ಬಿಕ್ಕಟ್ಟಿನ ಅನಂತರ ದೇಶಕ್ಕೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಲಿದ್ದು, ಜೀವನವು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರಲು ತಿಂಗಳುಗಳ್ಳೋ ಅಥವಾ ವರ್ಷಗಳೇ ಬೇಕಾಗಬಹುದು ಎಂದಿದ್ದಾರೆ ಅವರು.

ಇದೇ ವೇಳೆ ದೇಶದಲ್ಲಿ ತಲೆದೋರುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸಲು ಶತಪ್ರಯತ್ನ ಮಾಡುತ್ತಿದ್ದು, ಸ್ವೀಡನ್‌ ಪ್ರತಿಯೋರ್ವ ಪ್ರಜೆಯ ಉದ್ಯೋಗ ಉಳಿಸಿಕೊಳ್ಳಲು ಆಡಳಿತ ವರ್ಗ ಹಗಲು ರಾತ್ರಿ ಶ್ರಮಿಸುತ್ತಿದೆ. ಆದರೆ ಆ ಪ್ರಯತ್ನ ಸಂಪೂರ್ಣವಾಗಿ ಫಲ ಕೊಡುತ್ತದೆ ಎಂದು ಖಚಿತವಾಗಿ ಹೇಳಲಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next