Advertisement
ಮನೆಯಲ್ಲಿಯೇ ಈ ತೊಂದರೆ ನಿವಾರಣೆಗೆ ಆಹಾರ, ಮದ್ದು, ಉಪಚಾರಗಳನ್ನು ಮಾಡಬಹುದು. ಇವು ಬೆವರುಗುಳ್ಳೆಯ ನಿವಾರಣೆಯೊಂದಿಗೆ ತನುಮನಗಳಿಗೂ ತಂಪು ನೀಡುತ್ತವೆ.
1 ಟಬ್ ನೀರಿಗೆ 1-2 ಕಪ್ ಓಟ್‌ಮೀಲ್ ಬೆರೆಸಬೇಕು. ಇದರಲ್ಲಿ 10-15 ನಿಮಿಷವಿದ್ದು, ಟಬ್‌ಬಾತ್ ಅಥವಾ ಅವಾಗಾಹ ಸ್ನಾನ ಮಾಡಿದರೆ ಶಮನಕಾರಿ. ಇದು ಬೆವರಿನ ಗ್ರಂಥಿಗಳ ಅವರೋಧ ನಿವಾರಣೆ ಮಾಡಿ, ಚರ್ಮದ ಉರಿಯೂತ ಗುಣಪಡಿಸುತ್ತದೆ. ಬೆವರುಗುಳ್ಳೆ ನಿವಾರಣೆಯಾಗುವುದರ ಜೊತೆಗೆ ದೇಹಕ್ಕೂ ಹಿತ ಹಾಗೂ ಶ್ರಮನಿವಾರಕ ಈ ಸ್ನಾನ. ಎರಡು ದಿನಕ್ಕೊಮ್ಮೆ ಬಳಸಿದರೆ ಉತ್ತಮ. ಎಲೋವೆರಾ ಹಾಗೂ ಅರಸಿನದ ಲೇಪ
ಎಲೋವೆರಾವು ಚರ್ಮಕ್ಕೆ ಟಾನಿಕ್‌ನಂತೆ ಜೊತೆಗೆ ಉರಿಯೂತ ನಿವಾರಕ ಅರಸಿನವು ಸಹ ಬ್ಯಾಕ್ಟೀರಿಯಾ ಮೊದಲಾದ ಸೂಕ್ಷ್ಮಾಣು ಜೀವಿಗಳನ್ನು ನಿವಾರಣೆ ಮಾಡುತ್ತದೆ. ದಿನಕ್ಕೆ 1-2 ಬಾರಿ ಈ ಲೇಪ ಹಚ್ಚಿದರೆ ಶೀಘ್ರವಾಗಿ ಬೆವರುಗುಳ್ಳೆ ನಿವಾರಣೆಯಾಗುತ್ತದೆ. ಇದು ಚರ್ಮದಲ್ಲಿ ಜಲೀಯ ಅಂಶದ ಕೊರತೆ ಉಂಟಾಗದಂತೆ ಸಹ ಕಾರ್ಯವೆಸಗುತ್ತದೆ.
Related Articles
ಕಡಲೆಹಿಟ್ಟು 3 ಚಮಚ, ಗುಲಾಬಿ ಜಲ 10 ಚಮಚ, ಫ್ರಿಜ್ ನೀರು 4 ಚಮಚ ಬೆರೆಸಿ ಲೇಪಿಸಿದರೆ ಶಮನಕಾರಿ. ಇದೇ ರೀತಿ ಮುಲ್ತಾನಿ ಮಿಟ್ಟಿ , ಗುಲಾಬಿ ಜಲದ ಲೇಪನವೂ ಹಿತಕಾರಿ. ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಬೆವರುಗುಳ್ಳೆ ಉಂಟಾದಾಗ ಈ ಎರಡು ಲೇಪಗಳು ಶೀಘ್ರ ಫಲಕಾರಿ.
Advertisement
ಅಡುಗೆಸೋಡಾದಿಂದ ಗೃಹೋಪಚಾರಮೈಯ ಅಧಿಕ ಭಾಗದ ಚರ್ಮದಲ್ಲಿ ಬೆವರು ಗುಳ್ಳೆಗಳು ಕಂಡುಬಂದರೆ ಈ ಲೇಪ ಹಿತಕರ. 8-10 ಚಮಚ ಅಡುಗೆ ಸೋಡಾವನ್ನು 2 ಕಪ್ ನೀರಿಗೆ ಬೆರೆಸಿ ಕಲಕಬೇಕು. ಇದರಲ್ಲಿ ದಪ್ಪ ಹತ್ತಿ ಉಂಡೆ ಅದ್ದಿ, ಅದನ್ನು ಬೆವರುಗುಳ್ಳೆ ಇರುವ ಕಡೆಗೆ ಉಜ್ಜಬೇಕು. 4-5 ನಿಮಿಷದ ಬಳಿಕ ಸ್ನಾನ ಮಾಡಬೇಕು. ಕ್ಷಾರೀಯ ಅಂಶ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣವಿರುವುದರಿಂದ ಇದು ಬೆವರುಗುಳ್ಳೆಗಳನ್ನು ಶೀಘ್ರ ಗುಣಪಡಿಸುತ್ತದೆ. ಆಲೂಸ್ಲೆ„ಸ್ ಮಾಲೀಶು
ತಾಜಾ ಆಲೂಗಡ್ಡೆಯನ್ನು ದುಂಡಗೆ ಬಿಲ್ಲೆಗಳಾಗಿ ಕತ್ತರಿಸಬೇಕು. ಇದನ್ನು ಫ್ರಿಜ್ ನೀರಿನಲ್ಲಿ ಅದ್ದಿ ಬೆವರುಗುಳ್ಳೆ ಇರುವ ಭಾಗಕ್ಕೆ ಮಾಲೀಶು ಮಾಡಬೇಕು. ಹತ್ತು ನಿಮಿಷದ ಬಳಿಕ ತೊಳೆಯಬೇಕು. (ದಿನಕ್ಕೆ 1-2 ಬಾರಿ). ಇದು ಚರ್ಮಕ್ಕೆ ಎಮೋಲಿಯಂಟ್. ಕಲ್ಲಂಗಡಿ ಜ್ಯೂಸ್ ಚಿಕಿತ್ಸೆ
ಕಲ್ಲಂಗಡಿ ಹಣ್ಣಿನ ರಸ ದಪ್ಪಗೆ ಲೇಪಿಸಿ, 20 ನಿಮಿಷಗಳ ಬಳಿಕ ತೊಳೆಯಬೇಕು. ದಿನಕ್ಕೆ 1-2 ಕಪ್ ಕಲ್ಲಂಗಡಿ ಹಣ್ಣಿನ ಜ್ಯೂಸ್ ಸೇವಿಸಬೇಕು. ಇದು ಅಧಿಕ ನೀರಿನ ಅಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದ್ದು ಚರ್ಮದ ಟಾನಿಕ್ ಹಾಗೂ ದೇಹಕ್ಕೆ ತಂಪು. ಆದ್ದರಿಂದ ಬೆವರಿನ ಗುಳ್ಳೆ , ಉಷ್ಣದ ಗುಳ್ಳೆಗಳನ್ನು ಶೀಘ್ರ ನಿವಾರಣೆ ಮಾಡುತ್ತದೆ. ಹಸಿಶುಂಠಿ ಜಲದ ಮನೆಮದ್ದು
2 ಚಮಚ ಹಸಿ ಶುಂಠಿಯ ತುರಿಯನ್ನು 2 ಕಪ್ ನೀರಿಗೆ ಬೆರೆಸಿ ಕುದಿಸಿ ಸೋಸಬೇಕು. ಆರಿದ ಬಳಿಕ, ಹತ್ತಿ ಉಂಡೆಯನ್ನು ಈ ನೀರಿನಲ್ಲಿ ಅದ್ದಿ ಬೆವರುಗುಳ್ಳೆಗಳಿಗೆ ಲೇಪಿಸಬೇಕು. 10-15 ನಿಮಿಷಗಳ ಬಳಿಕ ತೊಳೆಯಬೇಕು. ತುಂಬಾ ತುರಿಕೆ ಹಾಗೂ ಪೂಯಯುಕ್ತ ಬೆವರುಗುಳ್ಳೆಗಳಿದ್ದಾಗ ಶುಂಠಿಯ ಜಲದ ಪ್ರಯೋಗ ಪರಿಣಾಮಕಾರಿ. ಕರ್ಪೂರದ ಎಣ್ಣೆಯ ಪ್ರಯೋಗ
2 ಬಿಲ್ಲೆ ಕರ್ಪೂರವನ್ನು 10 ಚಮಚ ಕಹಿಬೇವಿನ ಎಣ್ಣೆಯಲ್ಲಿ ಪುಡಿಮಾಡಿ ಬೆರೆಸಬೇಕು. ಚೆನ್ನಾಗಿ ಕಲಕಿ ಗಾಜಿನ ಬಾಟಲಲ್ಲಿ ಹಾಕಿಡಬೇಕು. ಇದನ್ನು ಬೆವರುಗುಳ್ಳೆಗಳಿಗೆ ಲೇಪಿಸಿ 10 ನಿಮಿಷದ ಬಳಿಕ ತೊಳೆಯಬೇಕು. ತುರಿಕೆ ಹಾಗೂ ಉರಿ ಅಧಿಕವಿರುವ ಬೆವರು ಗುಳ್ಳೆಗಳಿಗೆ ಈ ಮನೆಮದ್ದು ಉತ್ತಮ. ಡಾ. ಅನುರಾಧಾ ಕಾಮತ್