Advertisement

ಮಹಿಳೆಯರಿಗೆ ಸುರಕ್ಷತೆಯ ಭರವಸೆ ನೀಡುವ ಸ್ವಧಾರ ಆಶ್ರಯ ತಾಣ ಆರಂಭ

12:13 PM Dec 18, 2021 | Team Udayavani |

ಶಿರಸಿ: ಇಲ್ಲಿನ‌ ಸ್ಕೋಡ್ ವೇಸ್  ಹಾಗೂ ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಪರಿತ್ಯಕ್ತ ಮಹಿಳೆಯರ ಆಶ್ರಯ ತಾಣ ಸ್ವಧಾರ ಗೃಹ ಆರಂಭಿಸಲಾಗಿದೆ ಎಂದು ಸ್ಕೋಡ್ ವೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ತಿಳಿಸಿದರು.

Advertisement

ಅವರು‌ ಶನಿವಾರ‌ ನಗರದ ಸ್ವಧಾರ ಗೃಹದಲ್ಲಿ ಸುದ್ದಿಗೋಷ್ಟಿ‌ ನಡೆಸಿ ಮಾತನಾಡಿ, ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ನಿರ್ಗತಿಕರು ಇದ್ದಿದ್ದು ಕಂಡರೆ ಕರಕೊಂಡು ಬರುತ್ತೇವೆ. ಇಲ್ಲಿ ಬಂದವರಿಗೆ ಸುರಕ್ಷತೆಯ ಭರವಸೆ ಇದೆ‌ ಎಂಬ ವಾತಾರಣ ನಿರ್ಮಿಸಿದ್ದೇವೆ ಎಂದರು.

58ಜನ ಈಗಾಗಲೇ ಆಶ್ರಯ ಪಡೆದಿದ್ದೇವೆ. 6 ವರ್ಷದ ವರೆಗಿನ ಮಗು ಇದ್ದರೆ ಅವರಿಗೂ ಆಶ್ರಯ. ದುಡಿಯುವ ಆಸಕ್ತಿ ಇರುವ ಮಹಿಳೆಗೆ ತರಬೇತಿ ಸಹ ನೀಡುತ್ತೇವೆ.  ಹೆಚ್ಚಿನದಾಗಿ ದೌರ್ಜನ್ಯಕ್ಕೆ ಒಳಗಾದವರು ಬರುತ್ತಿದ್ದಾರೆ. ನಿರ್ಗತಿಕರ ಮೇಲೆ ಮತ್ತೆ ದೌರ್ಜನ್ಯ ಆಗಬಾರದು ಎಂಬ ಕಾರಣಕ್ಕೆ ಸ್ವಧಾರ ಗೃಹ ಮಾಡಿದ್ದೇವೆ ಎಂದರು.

18 ವರ್ಷಕ್ಕಿಂತ ಮೇಲ್ಪಟ್ಟು ಸಮಸ್ಯೆಯಲ್ಲಿರುವವರು 30 ರಿಂದ 50 ಜನ ಉಳಿಯಬಹುದು. ಆರ್ಥಿಕ, ಸಾಮಾಜಿಕ ಭದ್ರತೆ ನೀಡಲಾಗುತ್ತದೆ. ಯಾವುದೇ ಬೆಂಬಲ ಇಲ್ಲದವರು ಇಲ್ಲಿ ನೆರವು‌ಪಡೆಯಬಹುದು. ಒಬ್ಬರಿಗೆ ಸರಕಾರ 43 ರೂ. ಕೊಡುತ್ತದೆ‌ ಊಟೋಪಹಾರ ಮಾಡಬೇಕು. ಸರಕಾರದ ಮೇಲೆ  ಪೂರ್ಣ ಅಲ್ಲ. ಸಾರ್ವಜನಿಕರ ನೆರವೂ ಇದೆ ಎಂದರು.

ನಿತ್ಯ, ಯೋಗ, ಪ್ರಾರ್ಥನೆ ಎಲ್ಲ ಸೌಲಭ್ಯ ಇದೆ.  ಸ್ವತಂತ್ರವಾಗಿ‌ ನಿಲ್ಲುವ ತನಕ‌ ಅವಕಾಶ ನೀಡಲಾಗುತ್ತದೆ ಎಂದ ಅವರು, ಈಗ ಇರುವ ಕಟ್ಟಡ ಸ್ವಂತದ್ದಲ್ಲ. ಆದರೆ, ಸ್ವಂತ ಕಟ್ಟಡ ಆಗಬೇಕು. ನಗರಸಭರ ಅಥವಾ ಸ್ಥಳೀಯ ಆಡಳಿತ 2 ಗುಂಟೆ ಜಾಗ ನೀಡಿದರೆ ದಾನಿಗಳ ಸಹಕಾರದೊಂದಿಗೆ ಸ್ವಂತ ಕಟ್ಟಡ ನಿರ್ಮಿಸುತ್ತೇವೆ

Advertisement

ಅಗತ್ಯ ಉಳ್ಳವರು 9743522521 ಸಂಪರ್ಕ ಮಾಡಬಹುದು ಎಂದೂ ‌ಹೇಳಿದರು.

ಈ ವೇಳೆ ಸಿಡಿಪಿಒ ದತ್ತಾತ್ರಯ ಹೆಗಡೆ, ಸ್ಫೋಡ್ ವೇಸ್ ಸೌಹಾರ್ದದ ಸರಸ್ವತಿ ಎನ್.ರವಿ, ದಾನೇಶ್ವರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next