Advertisement

ಸ್ವಚ್ಛ ಸರ್ವೇಕ್ಷಣ್‌; ನಂ.1 ಸ್ಥಾನಕ್ಕೆ ಪಾಲಿಕೆ ಪಣ : ಜಾಗೃತಿ ಮೂಡಿಸಲು ಸಿದ್ಧತೆ

12:35 PM Jan 19, 2021 | Team Udayavani |

ಮೈಸೂರು: ದೇಶದಲ್ಲಿ 2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣ್‌ ಆರಂಭವಾಗಿದ್ದು, ಈ ಬಾರಿ ನಂ.1 ಸ್ಥಾನ ಮುಡಿ ಗೇರಿಸಿಕೊಳ್ಳಲು ಪ್ರತಿ ಮನೆ ಮನೆಗೂ ತೆರಳಿ ಹಸಿ ಮತ್ತು ಒಣಕಸ ಹಾಗೂ ಜೈವಿಕ ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆ ಕುರಿತು ಜಾಗೃತಿಗೆ ಮೈಸೂರು ನಗರಪಾಲಿಕೆ ಮುಂದಾಗಿದೆ.

Advertisement

ಈ ಸಂಬಂಧ ನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆಯುಕ್ತ ಗುರುದತ್ತ ಹೆಗ್ಡೆ, ತುಸು ಬದಲಾವಣೆಯೊಂದಿಗೆ ಈ ಬಾರಿಯ ಸ್ವಚ್ಛ ಸರ್ವೇಕ್ಷಣ್‌ ನಡೆಸಲಾಗುತ್ತಿದೆ. ಎಂದಿನಂತೆ 6 ಸಾವಿರ ಅಂಕವನ್ನು ನಿಗದಿಪಡಿಸಲಾಗಿದೆ. ಆದರೆ, 4 ವಿಭಾಗದ ಬದಲು 3 ವಿಭಾಗದಲ್ಲಿ ಸರ್ವೆ ಮಾಡಲಾಗುತ್ತಿದೆ. ಕಳೆದ ಬಾರಿ ಸಿಟಿಜನ್‌ μàಡ್‌ ಬ್ಯಾಕ್‌ನಲ್ಲಿ ಹಿನ್ನಡೆ ಉಂಟಾಗಿತ್ತು.

ಹಾಗಾಗಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಪಾಲಿಕೆ ಈ ಬಾರಿ ಪ್ರತಿ ಮನೆ ಮನೆಗೂ ತಲುಪಿ ಮೂಲದಿಂದಲೇ ಹಸಿ ಮತ್ತು ಒಣಕಸ ಹಾಗೂ ಜೈವಿಕ ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತದೆ. ಅಲ್ಲದೆ, ಈಗಾಗಲೇ ಜೆ.ಪಿ.ನಗರದಲ್ಲಿರುವ ಕೆಲ ಅಪಾರ್ಟ್‌ಮೆಂಟ್‌ ಗಳಲ್ಲಿ ಮನೆಯ ತ್ಯಾಜ್ಯದಿಂದಲೇ ರಸಗೊಬ್ಬರ ಮಾಡಿ ಅವುಗಳನ್ನು ಗಿಡಗಳಿಗೆ ಬಳಸುತ್ತಿದ್ದಾರೆ. ಅದೇ ರೀತಿ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂ ಮಾಡಲು ಚಿಂತಿಸಲಾಗಿದೆ. ಜತೆಗೆ ಮಾಲ್‌ಗ‌ಳಲ್ಲಿ ಕಿಯೋಸ್ಕ್ ತೆರೆಯುವುದು, ಬೀದಿ ನಾಟಕಗಳು ಹಾಗೂ ಗೋಡೆ ಚಿತ್ರಗಳ ಮೂಲಕ ಜಾಗೃತಿ ಮೂಡಿಸಲು ಚಿಂತನೆ ನಡೆಸಲಾಗಿದೆ. ಮುಖ್ಯವಾಗಿ ಬಯೋಗ್ಯಾಸ್‌ ಸ್ಥಾಪಿಸಲು ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಇದನ್ನೂ ಓದಿ:ಗೋವಾ ಚಿತ್ರೋತ್ಸವ: ಭಾರತೀಯ ಪನೋರಮಾಕ್ಕೆ ಚಾಲನೆ; ‘ಪಿಂಕಿ ಎಲ್ಲಿ’ ಪ್ರದರ್ಶನ

ಒಂದು ವೇಳೆ ಬಯೋಗ್ಯಾಸ್‌ ಸ್ಥಾಪನೆಯಾದರೆ, ಸ್ವತ್ಛ ಸರ್ವೇಕ್ಷಣ್‌ಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು
ಹೇಳಿದರು.

Advertisement

ಕಳೆದ ಬಾರಿ 5ನೇ ಸ್ಥಾನ: ಸ್ವತ್ಛ ಸರ್ವೇಕ್ಷಣ್‌ನಲ್ಲಿ 2016  ರಲ್ಲಿ 73 ನಗರಗಳು, 2017ರಲ್ಲಿ 434, 2018ರಲ್ಲಿ 4,203, 2019ರಲ್ಲಿ 4,237 ಹಾಗೂ 2020ರಲ್ಲಿ 4242 ನಗರಗಳು ಭಾಗಿಯಾಗಿದ್ದವು. 2020ರಲ್ಲಿ ನಿಗದಿ ಮಾಡಿದ್ದ 6 ಸಾವಿರ ಅಂಕಗಳ ಪೈಕಿ ಮಧ್ಯಪ್ರದೇಶದ ಇಂದೋರ್‌ 5,647 ಅಂಕ ಪಡೆದು ಮೊದಲ ಸ್ಥಾನ, ಗುಜರಾತಿನ ಸೂರತ್‌ 5519.59 ಅಂಕ ಪಡೆದು ದ್ವಿತೀಯ, ಮಹಾರಾಷ್ಟ್ರದ ನವಿ ಮುಂಬೈ 5467.89 ಅಂಕಗಳನ್ನು ಪಡೆದು ತೃತೀಯ, ಛತ್ತೀಸ್‌ಗಡದ ಅಂಬಿಕಾಪುರ 5428.31 ಅಂಕಗಳನ್ನು ಪಡೆದು 4ನೇ ಸ್ಥಾನ ಹಾಗೂ ಕರ್ನಾಟಕದಲ್ಲಿ ಮೈಸೂರು 5298.61 ಅಂಕಗಳನ್ನು ಪಡೆದು 5ನೇ ಸ್ಥಾನ ಪಡೆದಿತ್ತು ಎಂದು ವಿವರಿಸಿದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಮಾತನಾಡಿ, ಈ ಬಾರಿ 7 ಸ್ಟಾರ್‌ಗಳನ್ನು ಗಳಿಸಿಕೊಳ್ಳುವ ಚಿಂತನೆಯಲ್ಲಿ ಪಾಲಿಕೆ ಇದೆ. ಕಳೆದ ಎರಡು ವರ್ಷ ಗಳಿಂದ ಮೈಸೂರು ನಗರ ಸ್ವತ್ಛತೆ(ತ್ಯಾಜ್ಯ ಮುಕ್ತ ನಗರಿ)ಯಲ್ಲಿ ಸತತ 5 ಸ್ಟಾರ್‌ ರ್‍ಯಾಂಕ್‌ ಪಡೆದುಕೊಂಡಿದೆ. ಅಲ್ಲದೆ ತ್ಯಾಜ್ಯಮುಕ್ತ ಹಾಗೂ ಬಯಲು ಶೌಚ ಮುಕ್ತ ನಗರವಾಗಿ ಘೋಷಣೆಯಾಗಿದೆ. ಎರಡೂ ವಿಭಾಗದಲ್ಲಿಯೂ 7 ಸ್ಟಾರ್‌ ಪಡೆಯುವ ಚಿಂತನೆಯ ಲ್ಲಿದ್ದು, ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನೂ ಆಹ್ವಾನಿಸಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next