Advertisement
ಬೆಂಗಳೂರಿನ ರೈಲು ನಿಲ್ದಾಣ ಸೇರಿದಂತೆ, ಗಾಂಧೀಜಿ ಭೇಟಿ ನೀಡಿದ್ದ ಅಥವಾ ಅವರ ಜೀವನಕ್ಕೆ ನಂಟು ಹೊಂದಿ ರುವ 43 ನಿಲ್ದಾಣಗಳನ್ನು ಗುರುತು ಮಾಡಲಾಗಿದ್ದು, ಇವುಗಳಿಗೆ ಸುಣ್ಣ ಬಣ್ಣ ಬಳಿದು ಕಂಗೊಳಿಸುವಂತೆ ಮಾಡ ಲಾಗುತ್ತದೆ. ಇದಲ್ಲದೆ, ಎಲ್ಲಾ ನಿಲ್ದಾಣಗಳಲ್ಲಿ ಗಾಂಧಿಯ ಅಹಿಂಸೆ, ಐಕ್ಯತೆ, ಶುಚಿತ್ವ, ಸ್ವಯಂ ಸೇವೆ, ಅಸ್ಪೃಶ್ಯತೆ ನಿವಾರಣೆ, ಮಹಿಳಾ ಸಬಲೀಕರಣ ಸಿದ್ಧಾಂತಗಳನ್ನು ಸಾರುವ ಸಂದೇಶಗಳು, ಚಿತ್ರಗಳನ್ನು ಬಿಡಿಸಲು, ರೈಲ್ವೇ ಮಾರ್ಗಗಳ ಎರಡೂ ಬದಿಯಲ್ಲಿ ಗಿಡಗಳನ್ನು ನೆಡಲು ಸೂಚಿಸಲಾಗಿದೆ.