Advertisement

‘ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರ ಬುನಾದಿ’

08:09 AM Feb 04, 2019 | |

ಪುಂಜಾಲಕಟ್ಟೆ: ಇಲ್ಲಿನ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ನ ವತಿಯಿಂದ ಫೆ. 10ರಂದು ನಡೆಯಲಿರುವ 11ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ವಧು-ವರರ ನಿಶ್ಚಿತಾರ್ಥ ಕಾರ್ಯ ಕ್ರಮ ರವಿವಾರ ಪುಂಜಾಲಕಟ್ಟೆ ನಂದ ಗೋಕುಲ ಸಭಾಂಗಣದಲ್ಲಿ ಜರಗಿತು.

Advertisement

ಮುಖ್ಯ ಅತಿಥಿಯಾಗಿದ್ದ ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್‌ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ ಅವರು ಮಾತನಾಡಿ, ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರಬುನಾದಿಯಾಗಿದೆ. ಇದು ಕುಟುಂಬದ ಹಾಗೂ ಸಮಾಜದ ನೆಮ್ಮದಿಯ ಸುವ್ಯವಸ್ಥೆ ಎಂದರು.

ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ಪರಸ್ಪರರ ಸಲುವಾಗಿ ಸ್ವಹಿತ ತ್ಯಾಗ ಮಾಡಿದಾಗ ದಾಂಪತ್ಯ ಜೀವನ ಯಶಸ್ವಿಯಾಗುವುದು ಎಂದರು.

ಪುಂಜಾಲಕಟ್ಟೆ ಆಟೋರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುಧಾಕರ ಶೆಣೈ ಖಂಡಿಗ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಸದಸ್ಯ ರಮೇಶ್‌ ಪೂಜಾರಿ ಕುಡುಮೇರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ಭವ್ಯ ಭಾರತ ನಿರ್ಮಾಣಕ್ಕೆ ಯುವಕರನ್ನು ಒಗ್ಗೂಡಿಸಿ ಸಾಮಾಜಿಕ ಸೇವೆ ಸಲ್ಲಿಸು ತ್ತಿರುವ ತುಂಗಪ್ಪ ಬಂಗೇರ ಅವರ ಕಾರ್ಯ ಶ್ಲಾಘನೀಯ ಎಂದರು.

Advertisement

ಕ್ಲಬ್‌ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪ್ರಸ್ತಾವಿಸಿ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಲಿದ್ದು, ನಿಶ್ಚಿ ತಾರ್ಥ, ದಿಬ್ಬಣಗಳಿಂದ ಸಾಮೂಹಿಕ ವಿವಾಹ ವಿಶಿಷ್ಟವಾಗಿದೆ ಎಂದರು.

ವಾಮದಪದವು ವ್ಯ.ಸೇ.ಸ. ಬ್ಯಾಂಕ್‌ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಹಾಪ್‌ಕಾಮ್ಸ್‌ ನಿರ್ದೇಶಕ ವಿಜಯ ರೈ, ಕಾವಳಮೂಡೂರು ಗ್ರಾ.ಪಂ. ಸದಸ್ಯ ಮೋಹನ ಆಚಾರ್ಯ, ಉದ್ಯಮಿ ದಿನೇಶ್‌ ಶೆಟ್ಟಿ ದಂಬೆದಾರ್‌, ಗುತ್ತಿಗೆದಾರ ಪ್ರಶಾಂತ್‌ಶೆಟ್ಟಿ, ಮಡಂತ್ಯಾರು ಉಪಸ್ಥಿತರಿದ್ದರು.

ಕ್ಲಬ್‌ ಅಧ್ಯಕ್ಷ ಪ್ರಶಾಂತ್‌ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಕೋಶಾಧಿಕಾರಿ ರಾಜೇಶ್‌ ಬಂಗೇರ ಪುಳಿಮಜಲು, ಮಾಜಿ ಅಧ್ಯಕ್ಷ ಮಾಧವ ಬಂಗೇರ ಮತ್ತಿತರ ಸದಸ್ಯರು ಭಾಗವಹಿಸಿದ್ದರು. ಕ್ಲಬ್‌ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿ, ನಿರೂಪಿಸಿದರು.

ವಧು-ವರರಿಗೆ ಮಂಗಳ ವಸ್ತ್ರ
ಪಿಲಾತಬೆಟ್ಟು ವ್ಯ.ಸೇ.ಸ. ಬ್ಯಾಂಕ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ಅತ್ತಾಜೆ, ಪ್ರಗತಿಪರ ಕೃಷಿಕ ಗಿರೀಶ್‌ ಸಾಲ್ಯಾನ್‌ ಹೆಗ್ಡೆಬೆಟ್ಟು ಗುರಿಕಾರರಾಗಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ, ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಹಿಡಿದು ಮೂರು ಬಾರಿ ಪರಸ್ಪರ ಬದಲಾಯಿಸಿ ಕೊಂಡರು. ವಧು- ವರರು ಉಂಗುರ ವಿನಿಮಯ ಮಾಡಿಕೊಂಡರು. ವಧು-ವರರಿಗೆ ಮಂಗಳ ವಸ್ತ್ರ ವಿತರಿಸಲಾಯಿತು. 13 ಜೋಡಿ ವಧು-ವರರು ಸಹಿತ ಅವರವರ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಉತ್ತಮ ಕಾರ್ಯ
ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ. ದೀನ ದಲಿತರ ಬದುಕಿಗೆ ಶಕ್ತಿ ತುಂಬುವ ಇಂತಹ ಕಾರ್ಯಕ್ರಮ ಗಳನ್ನು ನಡೆಸುವ ಸ್ವಸ್ತಿಕ್‌ ಫ್ರೆಂಡ್ಸ್‌ ಅಭಿನಂದಾರ್ಹರು.
ಲಕ್ಷ್ಮೀನಾರಾಯಣ ಉಡುಪ, ದ.ಕ.,
ಉಡುಪಿ ಜಿಲ್ಲಾ ಹಾಪ್‌ಕಾಮ್ಸ್‌ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next