Advertisement

ಶಿರಸಿ: ಜೈಲಿನ ಕೈದಿಗಳಿಗೆ ಸ್ವರ್ಣವಲ್ಲಿ ಶ್ರೀಗಳ ಭಗವದ್ಗೀತಾ ಪಾಠ

01:00 PM Dec 06, 2021 | Team Udayavani |

ಶಿರಸಿ: ನಗರದ ಉಪ ಬಂಧಿಖಾನೆಯಲ್ಲಿ ವಿಚಾರಣಾಧೀನ ಕೈದಿಗಳಿಗೆ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ‌ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸೋಮವಾರ ಭಗವದ್ಗೀತಾ ಪ್ರವಚನ‌‌ ನುಡಿದರು.

Advertisement

ಆಶೀರ್ವಚನ‌‌ ನುಡಿದ ಶ್ರೀಗಳು, ಅಪರಾಧ ಚಟುವಟಿಕೆಯಲ್ಲಿ‌ ಜನರು ಪಾಲ್ಗೊಳ್ಳುವುದು ಯಾಕೆ? ಅಪರಾಧ ದ್ವೇಷಿಸಬೇಕು. ಅಪರಾಧಿ ಅಲ್ಲ. ಅಪರಾಧ ಯಾಕೆ ಆಗುತ್ತದೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ತನಗೆ‌ ತಾನೆ ಕೆಡುಕಾಗುವುದನ್ನು‌ ಯಾಕೆ‌‌ ಮಾಡಿಕೊಳ್ಳುತ್ತಾನೆ‌ ಎಂದೂ ಪರಾಮರ್ಶಿಸಿಕೊಳ್ಳಬೇಕು. ಅತಿಯಾದ ಆಸೆಯಿಂದ, ಕ್ರೋಧದಿಂದ‌‌ ಮನುಷ್ಯ‌ ಸಿಟ್ಟು‌ ಮಾಡಿಕೊಳ್ಳುತ್ತಾನೆ. ಆಗ ಇಂಥ‌ ಘಟನೆ ನಡೆಯುತ್ತದೆ ಎಂದು ವಿಶ್ಲೇಷಿಸಿದರು.

ಇಂದ್ರಿಯ ಹಾಗೂ ‌ಮನಸ್ಸು ಬುದ್ದಿಯ‌ ಮೂಲಕ‌ ನಮ್ಮನ್ನು‌ ತಪ್ಪು ದಾರಿಗೆ ಕರೆದು ಹೋಗುತ್ತದೆ. ಮೊದಲು ಇದನ್ನು ಹಿಡಿತದಲ್ಲಿ ಇಟ್ಟು ಕೊಳ್ಳಬೇಕು. ಇಂದ್ರಿಯ ಆಸೆಯಿಂದ ಆರೋಗ್ಯ ಕೂಡ ಹಾಳಾಗುತ್ತದೆ. ಇವುಗಳ ನಿಯಂತ್ರಣ ಮಾಡಿಕೊಂಡರೆ‌ ಒಳಿತು‌ ಎನ್ನುತ್ತಾನೆ ಭಗವಂತ ಎಂದರು.

ಸುನಂದಾ ಭಟ್ಟ, ಅನಿತಾ ಹೆಗಡೆ ಇತರರು ಗೀತೆ ಹೇಳಿಕೊಟ್ಟರು. ಪ್ರೊ.ಕೆ.ವಿ.ಭಟ್, ವೆಂಕಟರಮಣ ಹೆಗಡೆ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next