Advertisement

Udupi: ಇಳಿಕೆಯತ್ತ ಸ್ವರ್ಣಾ ನದಿ ನೀರಿನ ಮಟ್ಟ… ನೀರಿನ ಮಿತ ಬಳಕೆಗೆ ಸೂಚನೆ

11:31 AM Sep 01, 2023 | |

ಉಡುಪಿ : ನಗರಕ್ಕೆ ಕುಡಿಯುವ ನೀರು ಪೂರೈಕೆಯ ಮೂಲ ಸ್ವರ್ಣಾ ನದಿ. ಪ್ರತೀ ವರ್ಷ ಜನವರಿ- ಫೆಬ್ರವರಿವರೆಗೂ ಬಜೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರು ಇರುತ್ತದೆ. ಆದರೆ ಈ ವರ್ಷದ ನೀರಿನ ಮಟ್ಟ ಆತಂಕ ಸೃಷ್ಟಿಸಿದೆ..

Advertisement

ಈ ಜುಲೈಯಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಹೆಚ್ಚಿತ್ತು. ಆದರೆ ಆಗಸ್ಟ್‌ನಲ್ಲಿ ಮಳೆ ಬಾರದ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ 0.73 ಮೀ ಕಡಿಮೆ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಬಜೆ ಅಣೆಕಟ್ಟಿನಲ್ಲೂ ನೀರಿನ ಮಟ್ಟ ಕಡಿಮೆಯಾಗುವ ಆತಂಕ ಇದೆ. ಮುಂಗಾರು ಮಳೆ ವಿಳಂಬವಾಗಿ ನಗರದಲ್ಲಿ ಜೂನ್‌ನಲ್ಲಿಯೂ ನೀರಿಗೆ ಸಾಕಷ್ಟು ಪರದಾಡಬೇಕಾಯಿತು. ಟ್ಯಾಂಕರ್‌ ಮೂಲಕ ಮನೆಮನೆಗೆ ನೀರು ಪೂರೈಸ ಬೇಕಿತ್ತು. ಈಗಲೇ ಎಚ್ಚೆತ್ತುಕೊಂಡು ನೀರಿನ ಸಂರಕ್ಷಣೆ ಜತೆಗೆ ದುರ್ಬಳಕೆ ತಡೆಗ ಟ್ಟಲು ನಗರಸಭೆ ಸೂಕ್ತ ಯೋಜನೆ ರೂಪಿಸಬೇಕಿದೆ.

ನೀರಿನ ಮೂಲಗಳು ವ್ಯವಸ್ಥಿತವಾಗಲಿ
ನಗರಸಭೆಗೆ ಸಂಬಂಧಿಸಿ 22 ಬಾವಿಗಳು, 16 ಬೋರ್‌ವೆಲ್‌ ಜಲಮೂಲಗಳಿವೆ. ಪ್ರಸ್ತುತ ಮಳೆಯಿಂದ ಇದರಲ್ಲಿ ನೀರಿನ ಪ್ರಮಾಣ ಉತ್ತಮವಾಗಿದೆ. ಇವುಗಳ ಸೂಕ್ತ ನಿರ್ವಹಣೆಗೆ ಒತ್ತು ನೀಡಬೇಕಿದೆ. ಕೆಲವು ಮನೆಗ ಳಲ್ಲಿ ಹೆಸರಿಗೆ ಮಾತ್ರ ಮಳೆ ನೀರು ಕೊçಲು ವ್ಯವಸ್ಥೆ ಅಳವಡಿಸಲಾಗಿದೆ. ಕೆಲವರು ಇದನ್ನು ಸೂಕ್ತವಾಗಿ ನಿರ್ವ ಹಿ ಸುತ್ತಿಲ್ಲ ಎಂಬ ದೂರುಗಳಿವೆ. ನಗರಸಭೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ನೀರಿನ ಮಿತ ಬಳಕೆಗೆ ಸೂಚನೆ
ಮಳೆ ಕೊರತೆ ಇರುವುದರಿಂದ ನಗರಾಡಳಿತಗಳಿಗೆ ನೀರಿನ ಸಂರಕ್ಷಣೆ ಹಾಗೂ ಮಿತವ್ಯಯದ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ. ನಗರ ಭಾಗದಲ್ಲಿ ನೀರಿನ ದುರ್ಬಳಕೆ ತಡೆಯಲು ನಿರ್ದೇಶಿಸಿದ್ದೇವೆ.
– ಡಾ| ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ

ಮಳೆ ನೀರು ಕೊಯ್ಲು ಪರಿಶೀಲನೆ
ಮಳೆ ಕೊರತೆಯಿಂದ ಸ್ವರ್ಣಾ ನದಿಯಲ್ಲಿಯೂ ಕಳೆದ ವರ್ಷಕ್ಕಿಂತ ಈ ವರ್ಷ ನೀರಿನ ಮಟ್ಟ ಕುಸಿದಿದೆ. ಈಗಿಂದಲೇ ನಗರಸಭೆ ನೀರಿನ ಸಂರಕ್ಷಣೆ ಮತ್ತು ಜಲಮೂಲಗಳ ನಿರ್ವಹಣೆ, ಅಭಿವೃದ್ಧಿ ಬಗ್ಗೆ ಕಾರ್ಯಯೋಜನೆ ರೂಪಿಸಲಿದೆ. ನೀರು ಪೋಲು ಮತ್ತು ದುರ್ಬಳಕೆ ತಡೆಯಲು ಕಾರ್ಯಪಡೆ ರಚಿಸಲಾಗುವುದು. ಮನೆಗಳಲ್ಲಿ ಮಳೆ ನೀರು ಕೊçಲು ವ್ಯವಸ್ಥಿತವಾಗಿಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು.

Advertisement

– ರಾಯಪ್ಪ, ಪೌರಾಯುಕ್ತರು, ನಗರಸಭೆ

ಇದನ್ನೂ ಓದಿ: Mangaluru: ತುಂಬೆ ಡ್ಯಾಂ ಗೇಟುಗಳು ಈಗಲೇ ಬಂದ್‌!

Advertisement

Udayavani is now on Telegram. Click here to join our channel and stay updated with the latest news.

Next