Advertisement

ಶಸ್ತ್ರಸಜ್ಜಿತ ಡ್ರೋನ್‌ ಸಮುಚ್ಛಯ ಅಭಿವೃದ್ಧಿ

09:35 AM Jul 14, 2019 | mahesh |

ನವದೆಹಲಿ: ಮುಂದಿನ ಹತ್ತು ವರ್ಷಗಳಲ್ಲಿ ಒಂದಷ್ಟು ಡ್ರೋನ್‌ಗಳು ಜೇನು ನೊಣಗಳು ಹೋದಂತೆ ಶತ್ರು ದೇಶಕ್ಕೆ ಹಾರಿ ಹೋಗಿ ಬಾಲಕೋಟ್ ದಾಳಿ ರೀತಿಯಲ್ಲೇ ಉಗ್ರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಬರುವಂಥ ವ್ಯವಸ್ಥೆಯೊಂದರ ಕಲ್ಪನೆ ಬೆಂಗಳೂರಿನಲ್ಲಿ ಚಿಗುರೊಡೆಯುತ್ತಿದೆ.

Advertisement

ಪ್ರತಿಯೊಂದು ಗುಚ್ಛದಲ್ಲೂ ನೂರಾರು ಡ್ರೋನ್‌ಗಳು ಇರಬಹುದು. ಒಂದೊಮ್ಮೆ ಅವುಗಳ ಇರುವಿಕೆ ಶತ್ರುಗಳಿಗೆ ತಿಳಿದು ದಾಳಿ ನಡೆಸಿದರೂ, ಕೆಲವು ಡ್ರೋನ್‌ಗಳು ದಾಳಿಗೆ ತುತ್ತಾಗಬಹುದು. ಆದರೆ ಉಳಿದವುಗಳು

ಯಶಸ್ವಿಯಾಗಿ ತಮ್ಮ ಕೆಲಸ ಮುಗಿಸುತ್ತವೆ. ಇಂಥದ್ದೊಂದು ವಿಶಿಷ್ಟ ಕಲ್ಪನೆಯನ್ನು ವಾಸ್ತವಗೊಳಿಸಲು ಎಚ್ಎಎಲ್ ಮತ್ತು ಬೆಂಗಳೂರಿನ ಸ್ಟಾರ್ಟಪ್‌ ನ್ಯೂಸ್ಪೇಸ್‌ ರಿಸರ್ಚ್‌ ಆ್ಯಂಡ್‌ ಟೆಕ್ನಾಲಜೀಸ್‌ ಜೊತೆಯಾಗಿವೆ. ಅದಕ್ಕೆ ‘ಸ್ವಾರ್ಮ್ ಡ್ರೋನ್‌’ ಎಂದು ಕರೆಯಲಾಗುತ್ತಿದೆ. ಜತೆಗೆ ‘ಆಲ್ಫಾ ‘ಎಂಬ ಹೆಸರನ್ನೂ ನೀಡಲಾಗಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ ‘ಎಡಿಟಿವಿ’ ವರದಿ ಮಾಡಿದೆ.

ಇದರಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತದೆ. ಪ್ರತಿಯೊಂದು ಡ್ರೋನ್‌ ಅನ್ನೂ ನೆಟ್ವರ್ಕ್‌ ಮೂಲಕ ಸಂಪರ್ಕಿಸಲಾಗಿರುತ್ತದೆ. ಹೀಗಾಗಿ ಇವು ನಿಗದಿತ ಅಂತರದಲ್ಲಿ ಹಾರಾಡುತ್ತವೆ. ಅವುಗಳು ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಹಾರಾಡಬಲ್ಲವು ಮತ್ತು ಕೆಲವು ಗಂಟೆಗಳವರೆಗೆ ಹಾರಾಟ ನಡೆಸುವಷ್ಟು ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತವೆ. ವಾಯುಪಡೆ ವಿಮಾನದ ರೆಕ್ಕೆಗಳಲ್ಲಿ ಅಳವಡಿಸಿ ನಿಗದಿತ ಎತ್ತರಕ್ಕೆ ತೆಗೆದುಕೊಂಡು ಹೋಗಿ ಈ ಡ್ರೋನ್‌ಗಳನ್ನು ಬಿಡುಗಡೆ ಮಾಡಿದರೆ, ಅಲ್ಲಿಂದ ಇವು ಗುರಿಯ ಕಡೆಗೆ ಸಾಗಬಲ್ಲವು.

ಸದ್ಯ ಇದು ಕಲ್ಪನೆಯ ರೂಪದಲ್ಲಿದ್ದು, ಇನ್ನು ಕೆಲವು ವರ್ಷಗಳಲ್ಲಿ ಇದಕ್ಕೆ ಸ್ಪಷ್ಟ ರೂಪ ಸಿಗಲಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಸೇನೆ ಬಳಕೆಗೆ ಸಿಗಲಿದೆ ಎನ್ನಲಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಇದರ ಪ್ರಯೋಗ ಭಾರತದಲ್ಲಿ ನಡೆದರೂ ಅಚ್ಚರಿಯಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next