Advertisement

ಭರ್ಜರಿ ಗೆಲುವು : ಪ್ರಧಾನಿ ನರೇಂದ್ರ ಮೋದಿ, ಮತದಾರರಿಗೆ ಸುಶ್ಮಾ ಸ್ವರಾಜ್‌ ಅಭಿನಂದನೆ

04:39 PM May 24, 2019 | Sathish malya |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ “ಭಾರೀ ವಿಜಯ’ಕ್ಕೆ ಹಿರಿಯ ಬಿಜೆಪಿ ನಾಯಕಿ ಮತ್ತು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶದ ಮತದಾರರನ್ನು ಅಭಿನಂದಿಸಿದ್ದಾರೆ.

Advertisement

ದೇಶದ ಹೆಚ್ಚಿನೆಲ್ಲ ಭಾಗಗಳಲ್ಲಿ ಮೋದಿ ಅಲೆ ವ್ಯಕ್ತವಾಗುತ್ತಿದ್ದು ಬಿಜೆಪಿ 295 ಸ್ಥಾನಗಳಲ್ಲೀಗ ಮುಂದಿರುವುದರಿಂದ ಅದು ಮರಳಿ ಅಧಿಕಾರಕ್ಕೆ ಬಹುತೇಕ ಖಚಿತವಿದೆ.

ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷ 50 ಕ್ಷೇತ್ರಗಳಲ್ಲಿ ಮಾತ್ರವೇ ಮುನ್ನಡೆಯಲ್ಲಿದ್ದು ಬಿಜೆಪಿಗಿಂತ ಮೈಲುಗಟ್ಟಲೆ ಹಿಂದುಳಿದಿದೆ. ದೇಶದ ಎಲ್ಲ 542 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಕೃತ 343 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 336 ಸೀಟು ಪಡೆದಿತ್ತಾದರೆ ಬಿಜೆಪಿ 282 ಸ್ಥಾನ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next