ಮುಂಬೈ : ಆಂಟಿ ಎಂದು ಕರೆದಿದ್ದಕ್ಕೆ 4 ವರ್ಷದ ಮಗುವಿನ ಮೇಲೆ ಅವಾಚ್ಯ ಪದ ಬಳಕೆ ಮಾಡಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಗೆ ಟ್ರೋಲ್ ಗೆ ಒಳಗಾಗಿದ್ದಾರೆ.
ತಾನು ಆಗ ತಾನೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಸಮಯ. ಜಾಹೀರಾತೊಂದನ್ನು ಶೂಟಿಂಗ್ ಮಾಡುತ್ತಿದ್ದ ವೇಳೆ ನಾಲ್ಕು ವರ್ಷದ ಬಾಲಕನೊಬ್ಬ ಆಂಟಿ ಎಂದು ಕರೆದಿದ್ದಕ್ಕೆ ನನಗೆ ಮೈ ಉರಿದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ,
ಸ್ವರಾ ಭಾಸ್ಕರ್ ಮಾತನಾಡಿದ್ದ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ. ಆ ಬಾಲಕನಿಗೆ ಟಾಯ್ಲೆಟ್ ಕರೆದುಕೊಂಡಲು ಹೋಗಲು ಜನರು ಬೇಕು. ಮಕ್ಕಳೆಂದರೆ ಒಂಥರಾ ಇವಿಲ್ ಇದ್ದಂಗೆ ಎನ್ನುತ್ತಾ ತಮ್ಮ ಸಂಭಾಷಣೆ ಮುಂದುವರೆಸಿದ್ದಾರೆ.
ತನ್ನನ್ನು ಆಂಟಿ ಎಂದು ಕರೆದುದಕ್ಕೆ ಆಡಿದ ಮಾತುಗಳು ಈಗ ವ್ಯಾಪಕ ಟೀಕೆಗೊಳಗಾಗಿದ್ದು, ಇದರ ಪರಿಣಾಮವೇ #Swara_aunty ಟ್ರೆಂಡಿಂಗ್ ಕ್ರಿಯೇಟ್ ಆಗಿದೆ. ಆ ಮೂಲಕ ಟ್ರೋಲ್ ಗೆ ಒಳಗಾಗಿದ್ದಾರೆ.
Related Articles
ಈ ಬಗ್ಗೆ ಸೃಷ್ಠಿಕರಣ ನೀಡಿದ ನಟಿ ಸ್ವರ ಭಾಸ್ಕರ್ ಅಂದು ಚಿತ್ರೀಕರಣದ ಸಂದರ್ಭದಲ್ಲಿ ಆ ಮಗುವನ್ನು ಬೈದಿರಲಿಲ್ಲ. ಆದರೆ, ಈ ಸಂದರ್ಶನದಲ್ಲಿ ನನ್ನ ಮನಸ್ಸಿನೊಳಗೆ ನಡೆದಿದ್ದ ಚಿಂತನೆಗಳನ್ನು ಹಂಚಿಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.