Advertisement

ಸ್ವಪ್ನಾ ಲಾಕರ್‌ನಲ್ಲಿ 38 ಕೋಟಿ

01:11 AM Oct 02, 2020 | mahesh |

ತಿರುವನಂತಪುರ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌, ಖಾಸಗಿ ಬ್ಯಾಂಕೊಂದರಲ್ಲಿ 38 ಕೋಟಿ ರೂ. ಹಣ ಜಮೆ ಆಗಿರುವುದನ್ನು ಜಾರಿ ನಿರ್ದೇಶನಾಲಯದ . (ಇ.ಡಿ.) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಹಣ ಯುಎಇಯಿಂದ ಆಕೆಗೆ ಬಂದಿರುವುದಾಗಿ ಹೇಳಲಾಗಿದೆ.

Advertisement

ಬ್ಯಾಂಕಿನಿಂದ ಲಾಕರ್‌ ಸೌಲಭ್ಯವನ್ನು ಪಡೆದು ಅದರಲ್ಲಿ ಈ ದೊಡ್ಡ ಮೊತ್ತದ ಹಣ ಇಡಲಾಗಿದೆ. ಪ್ರಕರಣದ ಮತ್ತೂಬ್ಬ ಆರೋಪಿಯಾದ ಸಂದೀಪ್‌ ಕೂಡ ಇದೇ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ವಿಚಾರವೂ ಇದೇ ವೇಳೆ ಬೆಳಕಿಗೆ ಬಂದಿದೆ. ಸ್ವಪ್ನಾರ ಲಾಕರನ್ನು ಇನ್ನೂ ಜಪ್ತಿ ಮಾಡಲಾಗಿಲ್ಲ. ಬ್ಯಾಂಕ್‌ನ ಮ್ಯಾನೇಜರ್‌ರವರನ್ನು ವಿಚಾರಣೆಗೊಳಪಡಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಡುವಲ್ಲಿ ನಗರಸಭಾ ಸದಸ್ಯ ಕಾರಟ್‌ ಫೈಸಲ್‌ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ಬೆಳಗಿನ ಜಾವ ಅವರ ಮನೆ ಹಾಗೂ ಅದರ ಪಕ್ಕದಲ್ಲಿರುವ ಅವರಿಗೆ ಸಂಬಂಧಿಸಿದ ಕಟ್ಟಡದ ಮೇಲೆ ದಾಳಿ ನಡೆಸಿದ ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳು, ಕೆಲವು ಸಾಕ್ಷ್ಯಾಧಾರ ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next