Advertisement
ಅಭಿವೃದ್ಧಿ
Related Articles
Advertisement
ಕಾಮಗಾರಿಗೆ ಅನುಮತಿ
ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಆಕ್ಷೇಪಣೆ ಇದ್ದ ಕಾರಣ ವಿಧಾನಪರಿಷತ್ ಅರ್ಜಿ ಸಮಿತಿಯಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರ ಮೂಲಕ ಈ ವಿಚಾರದ ಅರ್ಜಿ ಸಲ್ಲಿಸಲಾಗಿತ್ತು. ಜನರ ಓಡಾಟದ ರಸ್ತೆಗೆ ತೊಂದರೆ ಮಾಡಕೂಡದು ಎಂದು ಆದೇಶವಾದಂತೆ ಪಂಚಾಯತ್ ವತಿಯಿಂದ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಶಾಶ್ವತ ಕಾಮಗಾರಿಗಾಗಿ ಐಟಿಡಿಪಿ ಇಲಾಖೆಗೆ ಬರೆಯಲಾಗಿದೆ.
ಗಿರಿಜನ ಕಾಲನಿ
ಈ ಪ್ರದೇಶದಲ್ಲಿ ಸುಮಾರು 30ರಷ್ಟು ಮನೆಗಳಿವೆ. ವಿದ್ಯುತ್ ಸರಬರಾಜು ಇದ್ದರೂ ವೋಲೆrೕಜ್ ಇರುವುದಿಲ್ಲ ಎನ್ನುತ್ತಾರೆ ಶ್ಯಾಮಿಹಕ್ಲುವಿನ ನಿಡ್ಜಲ್ ಕಾಳು ನಾಯ್ಕ. ಬಚ್ಚು ನಾಯ್ಕ ಅವರ ಮನೆ ಬಳಿ ಒಂದು ಕಾಲುಸಂಕದ ಅಗತ್ಯವಿದೆ. ಇಲ್ಲದಿದ್ದರೆ ಮಳೆಗಾಲದಲ್ಲಿ ತ್ರಾಸದಾಯಕ ಬದುಕಾಗುತ್ತಿದೆ ಎನ್ನುತ್ತಾರೆ ರಾಘವೇಂದ್ರ ನಾಯ್ಕ. ದಲಿತರ ಸಮಸ್ಯೆಗಳಿಗೆ ಯಾರೂ ಸ್ಪಂದಿಸುವುದಿಲ್ಲ ಎನ್ನುವ ನೋವು ಇಲ್ಲಿನ ಜನರಿಗಿದೆ. ಜಡ್ಡಿನಗದ್ದೆಯಲ್ಲಿ 60 ಶೇ., ಗೋಳಿಕಾಡಿನಲ್ಲಿ 100 ಶೇ., ಶ್ಯಾಮಿಹಕ್ಲುವಿನಲ್ಲಿ 100 ಶೇ., ಕೆಳಸುಂಕದಲ್ಲಿ 75 ಶೇ., ಬೊಳ್ಮನೆಯಲ್ಲಿ 40 ಶೇ., ಗಿರಿಜನರಿದ್ದಾರೆ. ಹಾಗಿದ್ದರೂ ಸಮಸ್ಯೆ ಪರಿಹರಿಸಲು ಜನಪ್ರತಿನಿಧಿಗಳು ಮುಂದಾಗಿಲ್ಲ. ಹರ್ಲಕ್ಕು, ಶ್ಯಾಮೆಹಕ್ಲು, ಗೋಳಿಕಾರು ಎಂಬಲ್ಲಿ ಕಿಂಡಿ ಅಣೆಕಟ್ಟುಗಳಿದ್ದು ಕಾಲುವೆ ಆಗಬೇಕಿದೆ.
ನೆಟ್ವರ್ಕ್ ಇಲ್ಲ
ಅಮಾಸೆಬೈಲು, ಜಡ್ಡಿನಗದ್ದೆ, ಶ್ಯಾಮಿಹಕ್ಲು, ಹರ್ಲಕ್ಕು, ನಿಡ್ಜಲ್, ಕೆಳಸುಂಕ, ಬಳ್ಮನೆ, ಗೋಳಿಕಾಡು ಪ್ರದೇಶಗಳಲ್ಲಿ ಪ್ರಮುಖ ಬೇಡಿಕೆಯೆಂದರೆ ಮೊಬೈಲ್ ನೆಟ್ವರ್ಕ್. ದೂರವಾಣಿ ಕರೆಗೆಂದೇ ಮನೆಯಿಂದ 4 ಕಿ.ಮೀ. ದೂರ ಬರಬೇಕಾಗುತ್ತದೆ. ರಸ್ತೆ ಸಮಸ್ಯೆ ಶೀಘ್ರ ನಿವಾರಣೆೆಯಾಗಬೇಕು.
– ತಮ್ಮಯ ನಾಯ್ಕ , ಕೆಳಸುಂಕ
ಪ್ರಸ್ತಾವನೆ ಕಳುಹಿಸಿದೆ
ಪಂಚಾಯತ್ ಮೂಲಕ ತಾತ್ಕಾಲಿಕ ದುರಸ್ತಿ ಮಾಡಲಾಗಿದ್ದು ಬೇಸಗೆಯಲ್ಲಿ ಸಮಸ್ಯೆಯಿಲ್ಲ. ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಶಾಶ್ವತ ಅಭಿವೃದ್ಧಿ ಕಾಮಗಾರಿಗೆ ಅನುದಾನ ಮಂಜೂರಿಗೆ ಐಟಿಡಿಪಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಸಮಸ್ಯೆ ಬಗೆಹರಿಯಲಿದೆ.
-ಸತೀಶ್ ನಾಯ್ಕಪಿಡಿಒ, ಅಮಾಸೆಬೈಲು