Advertisement

ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ 24ನೇ ಯತಿ

03:45 AM Feb 10, 2017 | Team Udayavani |

ಪ‌ರ್ತಗಾಳಿ ಜೀವೋತ್ತಮ ಮಠದಲ್ಲಿ ಶಿಷ್ಯ ಸ್ವೀಕಾರ 

Advertisement

ಪಣಜಿ (ಕಾಣಕೋಣ): ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠ ಪರಂಪರೆಯ 23ನೇ ಗುರು ಶ್ರೀಮತ್‌ ವಿದ್ಯಾರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಶಿಷ್ಯಸ್ವೀಕಾರ ಕಾರ್ಯಕ್ರಮವು ಗೋವಾದ ಪರ್ತಗಾಳಿ ಕಾಣಕೋಣನ ಕುಶಾವತಿ ನದಿ ತೀರದಲ್ಲಿರುವ ಶ್ರೀ ಸಂಸ್ಥಾನದ ಮೂಲ ಮಠ ಶ್ರೀರಾಮ ದೇವ ವೀರವಿಟuಲ ದೇವ ಸನ್ನಿಧಿಯಲ್ಲಿ ಗುರುವಾರ ನಡೆಯಿತು.

ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಮಠಾಧೀಶರು ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ  ಶ್ರೀ ವಿದ್ಯಾರಾಜತೀರ್ಥ ಶ್ರೀಪಾದರು ಉದಯ ಭಟ್‌ ಶರ್ಮಾ (ಪೂರ್ವಾಶ್ರಮದ ಹೆಸರು) ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು.

ಮುಂಜಾನೆ 4 ಗಂಟೆಗೆ ಪುರುಷ ಹೋಮ, ವಿರಜಾ ಹೋಮ ಹಾಗೂ ಶಾಕಲ ಹೋಮ ನಡೆಸಲಾಯಿತು. 7 ಗಂಟೆಗೆ ಕುಶಾವತಿ ನದಿ ತಟಾಕದಲ್ಲಿ ಸ್ನಾನ, ಪ್ರೇಷ ಉಚ್ಚಾರ ಶಿಖಾಸೂತ್ರ ತ್ಯಾಗ, ಕೇಶಮುಂಡನ, ಕೇಶಮುಂಡನದಲ್ಲಿ ಉಳಿಸಲಾದ ನಾಲ್ಕೈದು ಕೂದಲುಗಳನ್ನು ಶಿಷ್ಯರಾದ ಉದಯ ಭಟ್‌ ಅವರು ಸ್ವಯಂ ಛೇದನ ಮಾಡಿದರು. ಸಂಸಾರ ಪರಿತ್ಯಜಿಸುವ ಸಂನ್ಯಸ್ತೋಹಂ ಎಂದು ಮೂರು ಬಾರಿ ಘೋಷಿಸಿದರು. ಶ್ವೇತವಸ್ತ್ರ ಪರಿತ್ಯಾಗ ಮಾಡಿ ಕಾಷಾಯವಸ್ತ್ರ, ದಂಡ ಧಾರಣೆ ಮಾಡಿದರು. ಇದರೊಂದಿಗೆ ಅವರಿಗೆ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಎಂಬ ಅಭಿಧಾನ ನೀಡಲಾಯಿತು.

ಅನಂತರ ಕ್ರಮವಾಗಿ ರಥಬೀದಿ ಮಾರುತಿ, ಆರಾಧ್ಯ ದೈವ ಶ್ರೀರಾಮ ವೀರವಿಟuಲ ದೇವರು ಮತ್ತು ಗುರು ವೃಂದಾವನಗಳನ್ನು ಸಂದರ್ಶಿಸಿದರು. 
 
ಶ್ರೀರಾಮ ದೇವರ ಸನ್ನಿಧಿಯಲ್ಲಿ ಗುರುಗಳು ನೂತನ ಶಿಷ್ಯರಿಗೆ ಪ್ರಣವ ಮಂತ್ರೋಪದೇಶ ನೀಡಿದರು. ಅನಂತರ ಉಭಯ ಗುರುಗಳು ಪರಂಪರೆಯ ಸಿಂಹಾಸನದಲ್ಲಿ ಆಸೀನರಾದರು. ಶ್ರೀ ವಿದ್ಯಾರಾಜತೀರ್ಥ ವಡೇರ ಸ್ವಾಮೀಜಿ ಅವರು ಆಶೀರ್ವಚನ ಹಾಗೂ ಫಲಮಂತ್ರಾಕ್ಷತೆ ನೀಡಿದರು. 

Advertisement

ಈ ಶಿಷ್ಯ ಸ್ವೀಕಾರ ಸಮಾರಂಭಕ್ಕೆ ಗೋವಾ, ಕರ್ನಾಟಕ, ಮಹಾರಾಷ್ಟ್ರ , ಕೇರಳ ಮತ್ತಿತರ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಭಕ್ತರಿಗೆ ಊಟ ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next