Advertisement

Siddaramaiah ಅವರನ್ನು ನೋಡಿ ಜನರು ಮತ ಹಾಕಿಲ್ಲ ಎಂದ ಸ್ವಾಮೀಜಿ; ದಲಿತ ಸಿಎಂ ಚರ್ಚೆ

03:05 PM Sep 15, 2023 | Team Udayavani |

ಬೆಂಗಳೂರು: ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ದಲಿತ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ‌ ಬಂದಿದೆ. ದಲಿತರಲ್ಲೂ ಸಿಎಂ, ಡಿಸಿಎಂ ಆಗುವ ಅರ್ಹತೆ ಹೊಂದಿರುವವರಿದ್ದಾರೆ ಎಂದು ಅತೀ ಹಿಂದುಳಿದ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ಹೇಳಿದ್ದಾರೆ.

Advertisement

ದಲಿತ ಸಮುದಾಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹಾದೇವಪ್ಪ ಅವರನ್ನು ನೋಡಿ ಕಾಂಗ್ರೆಸ್ ಗೆ ಮತಹಾಕಿದೆ. ಸಿದ್ದರಾಮಯ್ಯ ಅವರನ್ನು ನೋಡಿ ಅಲ್ಲ ಎಂದು ಚಿತ್ರದುರ್ಗದ ಚಲವಾದಿ ಪೀಠದ ಜಗದ್ಗುರು ಬಸವನಾಗೇ ದೇವ ಮಾಹಾಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತ ಸಮುದಾಯದವರು ಕೂಡ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಈ ಹಿಂದೆ ಷಡ್ಯಂತ್ರ ಮಾಡಿ ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಲಾಯಿತು ಎಂದರು.

ರಾಷ್ಟ್ರೀಯ ನಾಯಕರ ಭೇಟಿ; ಈ ಸಂಬಂಧ ಮುಂದಿನ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ:Mysuru Dasara ; ಕ್ಯಾಪ್ಟನ್ ಅಭಿಮನ್ಯುವಿಗೆ ಭಾರ ಹೊರುವ ತಾಲೀಮು ಆರಂಭ

Advertisement

ನಾವು ಜಾತಕ ನೋಡುವ ಸ್ವಾಮೀಜಿಗಳು ಅಲ್ಲ ವೈಚಾರಿಕತೆ ನಂಬಿರುವ ಸ್ವಾಮೀಜಿಗಳು ಎಂದು ಚಲವಾದಿ ಸಮುದಾಯದ ಶ್ರೀಗಳು ಹೇಳಿದರು.

ಹರಿಪ್ರಸಾದ್ ಕಾಂಗ್ರೆಸ್ ನೋಟಿಸ್ ಗೆ ಖಂಡನೆ; ಸಿಎಂ ಹೆಸರು ಹೇಳದ ಟೀಕಾ ಪ್ರಹಾರ ನಡೆಸಿದ ಬಿ‌.ಕೆ ಹರಿಪ್ರಸಾದ್ ಗೆ ನೋಟಿಸ್ ನೀಡಿರುವ ಕಾಂಗ್ರಸ್ ಹೈಕಮಾಂಡ್ ನಡೆಯನ್ನು ಮಠಾಧೀಶರ ಒಕ್ಕೂಟ ಖಂಡಿಸಿತ್ತು. ಹರಿಪ್ರಸಾದ್ ತುಳಿತೊಳಗಾದ ಸಮುದಾಯದ ಪರ ಮಾತನಾಡಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಡೆ ಖಂಡಿಸುವುದಾಗಿ ಪ್ರಣವಾನಂದ ಶ್ರೀ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next