Advertisement

ಪ್ರತ್ಯೇಕ ಧರ್ಮ ಹೋರಾಟಕ್ಕಾಗಿ ಸ್ವಾಮೀಜಿಗಳಿಗೆ ಹಣ: ಶಾಮನೂರು

07:34 AM Oct 25, 2017 | Team Udayavani |

ಹರಿಹರ: “ಹಣ, ಕಾರು ನೀಡುವ ಮೂಲಕ ಕೆಲವು ಗುರುಗಳನ್ನು ಸೆಳೆದು ವೀರಶೈವ ಲಿಂಗಾಯತ ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಲಾಗುತ್ತಿದೆ’ ಎಂದು ಗಂಭೀರವಾಗಿ ಆರೋಪಿಸಿದ ವೀರಶೈವ ಮಹಾಸಭಾದ ಅಧ್ಯಕ್ಷ, ಶಾಸಕ ಡಾ| ಶಾಮನೂರು ಶಿವಶಂಕರಪ್ಪ, “ಯಾರೂ ಸಹ ಆಮಿಷಗಳಿಗೆ ಒಳಗಾಗಿ ಸಮಾಜವನ್ನು ಬಲಿಕೊಡಬಾರದು’ ಎಂದು ಮನವಿ ಮಾಡಿದ್ದಾರೆ.

Advertisement

ವೀರಶೈವ ಲಿಂಗಾಯತ ಧರ್ಮದ ಸಮಾಜ ಸಂಘಟನೆಗಾಗಿ ನಗರದ ಎಸ್‌ಜೆವಿಪಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಗುರುವಿರಕ್ತ ಮಠಾಧಿಧೀಶರು, ವಿದ್ವಾಂಸರು, ಕಾನೂನು ತಜ್ಞರು ಹಾಗೂ ಸಮಾಜದ ಗಣ್ಯರ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವರು ಕೇವಲ ತಮ್ಮ ಸ್ವಾರ್ಥಕ್ಕಾಗಿ, ಆಮಿಷಗಳನ್ನೊಡ್ಡಿ ತಮ್ಮ ಗುರಿ ಸಾಧಿಸಲು ಹೊರಟಿದ್ದಾರೆ. ಇತ್ತೀಚೆಗೆ ಕೂಡಲ ಸಂಗಮದ ಬಸವಮೃತ್ಯುಂಜಯ ಶ್ರೀಗಳಿಗೆ 55 ಲಕ್ಷ ರೂ. ಹಾಗೂ ಕಾರು ಕೊಡಲಾಗಿದೆ. ಸರಕಾರದಿಂದ 2.50 ಕೋಟಿ ರೂ.ಅನುದಾನದ ಭರವಸೆಯೂ ಸಿಕ್ಕಿದೆ ಎಂದು ತಿಳಿದು ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next